ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಿಜೆಪಿ ಶಾಸಕ 7 ದಿನ ಪೊಲೀಸ್ ಕಸ್ಟಡಿಗೆ!
ನ್ಯೂಸ್ ಕನ್ನಡ ವರದಿ-(14.04.18): ದೇಶದೆಲ್ಲೆಡೆ ಉನ್ನಾವೋ ಅತ್ಯಾಚಾರ ಪ್ರಕರಣವು ಸುದ್ದಿಯಾಗುತ್ತಿದೆ. 16 ವರ್ಷ ಹರೆಯದ ಬಾಲಕಿಯೋರ್ವಳ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತು ಆತನ ಬೆಂಬಲಿಗರು ಸಾಮೂಹಿಕ ಅತ್ಯಾಚಾರ ಮಾಡಿದ್ದರೆಂದು ಯೋಗಿ ಆದಿತ್ಯನಾಥ್ ಕಚೇರಿಯ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಾಲಕಿಯ ತಂದೆಯನ್ನೂ ಲಾಕಪ್ ಡೆತ್ ಹೆಸರಿನಲ್ಲಿ ಕೊಲ್ಲಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ನನ್ನು 7 ದಿನ ಪೊಲಿಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂದು ಶಾಸಕ ಸೆಂಗರ್ ಅವರನ್ನು ಲಕ್ನೋ ಕೋರ್ಟಿನಲ್ಲಿ ಹಾಜರುಪಡಿಸಲಾಯಿತು. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತನಗೆ ವಿಶ್ವಾಸವಿದೆ ಎಂದು ಸೆಂಗರ್ ಈ ಸಂದರ್ಭದಲ್ಲಿ ಹೇಳಿದರು. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಗ್ಯಾಂಗ್ ರೇಪ್ ಗೆ ಸಂಬಂಧಪಟ್ಟು ಸಿಬಿಐ, ಬಿಜೆಪಿ ಶಾಸಕನನ್ನು ಶುಕ್ರವಾರ ರಾತ್ರಿ ಬಂಧಿಸಿ ಸುಮಾರು 17 ತಾಸುಗಳ ಕಾಲ ಪ್ರಶ್ನಿಸಿತು.