ನೀನು ಗಂಡಸಾಗಿದ್ದರೆ ಮೊಳಕಾಲ್ಮೂರಲ್ಲಿ ಗೆದ್ದು ತೋರಿಸು: ಶ್ರೀರಾಮುಲು ಗೆ ಶಾಸಕ ತಿಪ್ಪೆಸ್ವಾಮಿ ಚಾಲೇಂಜ್
ನ್ಯೂಸ್ ಕನ್ನಡ ವರದಿ(15-04-2018): ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷ ಪಕ್ಷಗಳ ನಾಯಕರ ಮಧ್ಯೆ ವಾಕ್ಸಮರ ನಡೆಯುವುದು ಸಾಮಾನ್ಯವಾದರೂ ಇದೀಗ ಬಿಜೆಪಿಯಲ್ಲಿ ಸ್ವಪಕ್ಷೀಯರ ನಡುವೆ ಚ್ಯಾಲೇಂಜ್ ಹಾಗೂ ಪರಸ್ಪರ ವಾಕ್ ಸಮರಗಳು ಕೇಳಿಬರತೊಡಗಿದೆ. ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ ತನ್ನ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕಳೆದುಕೊಂಡ ಶಾಸಕ ತಿಪ್ಪೆಸ್ವಾಮಿ ಏಕವಚನದಲ್ಲಿ ಶ್ರೀರಾಮುಲು ಅವರಿಗೆ ಚಾಲೇಂಜ್ ಹಾಕಿದ್ದಾರೆ.
ನಿನ್ನಂಥವರಿಗೆ ಇಲ್ಲಿಯ ಜನ ಹೆದರುವುದಿಲ್ಲ. ಇದು ಮದಕರಿನಾಯಕ ಕಟ್ಟಿದ ಜಿಲ್ಲೆಯಾಗಿದೆ. ನೀನು ಒಂದು ವೇಳೆ ಗಂಡಸೇ ಆಗಿದ್ದರೆ ಮೊಳಕಾಲ್ಮೂರಿನಲ್ಲಿ ಗೆದ್ದು ತೋರಿಸು ಎಂದು ತಿಪ್ಪೆ ಸ್ವಾಮಿ, ಶ್ರೀರಾಮುಲು ವಿರುದ್ಧ ಗುಡುಗಿದ್ದಾರೆ.
ಮೊಳಕಾಲ್ಮೂರಿನಲ್ಲಿ ತನ್ನ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ತಿಪ್ಪೆಸ್ವಾಮಿ, ಈ ಚುನಾವಣೆಯಲ್ಲಿ ನಾನು ಶ್ರೀರಾಮುಲುಗೆ ಸೋಲಿನ ರುಚಿ ತೋರಿಸಿಯೇ ಸಿದ್ಧ. ನಾನು ಟಿಕೆಟ್ ಗಾಗಿ ಯಾರನ್ನೂ ಸಂಪರ್ಕಿಸುವುದಿಲ್ಲ. ಒಂದು ವೇಳೆ ಬಿದೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇಕರನಾಗಿ ಸ್ಪರ್ಧಿಸಿ ಶ್ರೀರಾಮುಲುಗೆ ಪಾಠ ಕಲಿಸುತ್ತೇನೆ ಎಂದಿದ್ದಾರೆ.