ಪಕ್ಷದ ವೇದಿಕೆಯಲ್ಲಿ ಸ್ಥಾನವಿಲ್ಲದ್ದಕ್ಕೆ ಬಿಜೆಪಿಯ ರಾಮಚಂದ್ರ ಗೌಡ ಏನು ಹೇಳಿದರು ಗೊತ್ತೇ?

ನ್ಯೂಸ್ ಕನ್ನಡ ವರದಿ(15-04-2028): ಬಿಜೆಪಿ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತನಗೆ ವೇದಿಕೆಯಲ್ಲಿ ಸ್ಥಾನವಿಲ್ಲದ್ದಕ್ಕಾಗಿ ಬಿಜೆಪಿಯ ಮಾಜಿ ರಾಮಚಂದ್ರ ಗೌಡ ಸಾರ್ವಜನಿಕವಾಗಿ ತನ್ನ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ಸಂಸ್ಥಾಪಕರಲ್ಲಿ ಒಬ್ಬನಾದ ನನಗೇ ವೇದಿಕೆಯಲ್ಲಿ ಸ್ಥಾನವಿಲ್ಲದಿದ್ದರೆ ಏನು ಅರ್ಥ ಎಂದು ರಾಮಚಂದ್ರ ಗೌಡ ತನ್ನ ಅಸಮಾಧಾನ ಹೊರಹಾಕಿದಾಗ ವೇದಿಕೆಯಲ್ಲಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರನ್ನು ಸಮಾಧಾನ ಪಡಿಸಿ ಅವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಭಾಷಣ ಮಾಡಲು ಅವಕಾಶ ನೀಡಿದರು. ಈ ಘಟನೆಗೆ ವೇದಿಕೆಯಲ್ಲಿದ್ದ ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಡಿ.ಎಸ್.ವೀರಯ್ಯ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಸಾಕ್ಷಿಯಾಗಿದ್ದರು.

ತನ್ನ ಭಾಷಣ ಪ್ರಾರಂಭಿಸಿದ ರಾಮಚಂದ್ರ ಗೌಡ, ಅಂಬೇಡ್ಕರ್ ಆಧುನಿಕ ಋಷಿಯಾಗಿದ್ದು ಅನೇಕ ಋಷಿಗಳು ತಮ್ಮ ವೈಯಕ್ತಿಕ ಜೀವನದ ಕುರಿತು ಬರೆದರೆ,ಅಂಬೇಡ್ಕರ್ ಅವರು ಸಂವಿಧಾನಕ್ಕಾಗಿ ಗ್ರಂಥವನ್ನು ಬರೆದರು ಎಂದು ಹೇಳಿದರು. ರಾಮಚಂದ್ರ ಗೌಡರ ವರ್ತನೆಯಿಂದ ಅಸಮಾಧಾನಗೊಂಡ ಜಾವಡೇಕರ್ ಭಾಷಣ ಮಾಡದೇ ನಿರ್ಗಮಿಸಿದರು.

Leave a Reply

Your email address will not be published. Required fields are marked *