ಅಂಬೇಡ್ಕರ್ ಸಂವಿಧಾನ ರಚಿಸದೇ ಇರುತ್ತಿದ್ದರೆ ನಾನು ಕುರಿ ಕಾಯಬೇಕಾಗಿತ್ತು: ಸಿಎಂ ಸಿಧ್ದರಾಮಯ್ಯ

ನ್ಯೂಸ್ ಕನ್ನಡ ವರದಿ(15-04-2018): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಮ್ಮ ದೇಶದ ಸಂವಿಧಾನವನ್ನು ರಚಿಸದೇ ಇರುತ್ತಿದ್ದರೆ ನಾನು ಇಂದು ಕುರಿ ಕಾಯಬೇಕಾಗುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 127ನೇ ಜಯಂತಿ ಪ್ರಯುಕ್ತ ಟ್ವೀಟ್ ಮಾಡಿರುವ ಸಿಎಂ ಸಿದ್ಧರಾಮಯ್ಯ, ‘ನನಗೆ ನನ್ನ ಭವಿಷ್ಯದ ಕುರಿತು ಭರವಸೆ ಹುಟ್ಟಿಸಿದ್ದು ಅಂಬೇಡ್ಕರ್ ರಚಿಸಿದ ಸಂವಿಧಾನವಾಗಿದೆ. ನನ್ನಲ್ಲಿದ್ದ ಹೋರಾಟದ ಕಿಚ್ಚು, ಸಾಮಾಜಿಕ ನ್ಯಾಯ ಬದ್ಧತೆಗಳು ಹಾಗೂ ದೇಶದ ಸಂವಿಧಾನವು ನನಗೆ ಶ್ರೀರಕ್ಷೆಯಾಗಿದೆ’ ಎಂದಿದ್ದಾರೆ.

ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸಲು ಹೊರಟ ವಿಚಿಧ್ರಕಾರಿ ಶಕ್ತಿಗಳ ವಿರುದ್ಧ ನಾವೆಲ್ಲರು ಒಗ್ಗಟ್ಟಿನ ಹೋರಾಟ ಮಾಡುವ ಮೂಲಕ ನಮ್ಮ ಸಂವಿಧಾನವನ್ನು ರಕ್ಷಿಸುವ ಸಲುವಾಗಿ ಪಣ ತೊಡಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *