ಬೆಂಗಳೂರಿಗೆ ಬಂದ 400 ಆರ್ಎಸ್ಎಸ್ ಸ್ವಯಂ ಸೇವಕರು: ಇವರ ಕೆಲಸವೇನು ಗೊತ್ತೇ?
ನ್ಯೂಸ್ ಕನ್ನಡ ವರದಿ(15-04-2018): ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದ 400 ಜನರ ಸ್ವಯಂ ಸೇವಕರನ್ನು ಆರ್ಎಸ್ಎಸ್ ಬೆಂಗಳೂರಿಗೆ ಕಳುಹಿಸಿದೆ
ಉತ್ತರ ಪ್ರದೇಶ ಹಾಗೂ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಅನುಭವವಿರುವ ಸುಮಾರು ನೂರಕ್ಕೂ ಹೆಚ್ಚು ಸ್ವಯಂ ಸೇವಕರು ಇದರಲ್ಲಿ ಒಳಗೊಂಡಿದ್ದು, ಇವರೆಲ್ಲಾ ಗುಜರಾತ್, ಮುಂಬೈ ಹಾಗೂ ದೆಹಲಿ ಮೂಲದವರಾಗಿದ್ದಾರೆಂದು ತಿಳಿದು ಬಂದಿದೆ.
ಉತ್ತರ ಪ್ರದೇಶ ಹಾಗೂ ಗುಜರಾತ್ ನಲ್ಲಿ ಈ ತಂಡ ಅಮಿತ್ ಶಾ ಅವರಿಗೆ ಸಹಾಯ ಮಾಡಿದೆ. ಈಗ ಅವರು ಕರ್ನಾಟಕದಲ್ಲಿದ್ದಾರೆ. ಇಲ್ಲಿ ನಡೆಯುವ ಚುನಾವಣೆ ಬಳಿಕ ಅವರು ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಿಗೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.