ಮೋದಿಯವರ ಈ ಫೋಟೋ ಟ್ವೀಟ್ ಮಾಡಿ ರಮ್ಯಾ ಹೇಗೆ ವ್ಯಂಗ್ಯವಾಡಿದ್ದು ಗೊತ್ತೇ? ಮುಂದೆ ಓದಿ

ನ್ಯೂಸ್ ಕನ್ನಡ ವರದಿ: ಇತ್ತೀಚೆಗೆ ಸಾಮಾಜಿಕ ಜಾಲತಾಣವನ್ನು ರಾಜಕೀಯ ನೇತಾರರು ಬಹಳಷ್ಟು ಉತ್ತಮ ರೀತಿಯಲ್ಲಿ ಕ್ರಿಯಾತ್ಮಕವಾಗಿ ಜನರೊಂದಿಗೆ ಬೆರೆಯಲು ಉಪಯೋಗಿಸುತ್ತಾರೆ. ತಮ್ಮ ಸಾಧನೆಗಳನ್ನು ತಿಳಿಸಲು ಮತ್ತು ವಿಪಕ್ಷಗಳ ವಿರುದ್ಧ ಕಿಡಿಕಾರಲು, ಟಾಂಗ್ ನೀಡಲೂ ಸಾಮಾಜಿಕ ಜಾಲತಾಣಗಳೇ ಈಗ ಪೆವಿರಿಟ್. ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಹಿಡಿದು ರಾಹುಲ್‍ಗಾಂಧಿ ವರೆಗೂ ಎಲ್ಲರೂ ಟ್ವಿಟರ್ ಮೂಲಕ ಸಕ್ರಿಯರಾಗಿರುತ್ತಾರೆ.

ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡುವುದರಲ್ಲಿ ಬಿಜೆಪಿ ಬೆಂಬಲಿಗರದ್ದೇ ಎತ್ತಿದ ಕೈ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ನಟಿ ಕಂ ರಾಜಕಾರಣಿ ರಮ್ಯಾ ನೇಮಕಗೊಂಡ ನಂತರ ಕಾಂಗ್ರೆಸ್ ಪಕ್ಷದಿಂದಲೂ ಟ್ರೋಲ್, ಟಾಂಗ್ ನೀಡುವ ಪದ್ದತಿಯೂ ಶುರುವಾಗಿದ್ದು, ಬಿಜೆಪಿಗರ ಟ್ರೋಲ್ ಗೆ ಪ್ರತಿಯಾಗಿ ಕೌಂಟರ್ ಟ್ರೋಲ್ ಶುರುವಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ಮೋದಿ ಅವರು ಕೈ ಮುಂದೆ ಮಾಡಿರುವ ಚಿತ್ರ ಪ್ರಕಟಿಸಿರುವ ರಮ್ಯಾ, ಅದರ ಮೇಲ್ಭಾಗದಲ್ಲಿ ‘ಪ್ರಧಾನಿಯಾಗಿರುವುದು ನನಗೆ ಸುಲಭದ ಮಾತಲ್ಲ!’ ಎಂಬ ಬರಹ ಪ್ರಕಟಿಸಿದ್ದಾರೆ. ಚಿತ್ರದ ಕೆಳಭಾಗದಲ್ಲಿ ‘2019ರಲ್ಲಿ ಈ ಚಿಹ್ನೆಗೆ ಮತ ನೀಡಿ’ ಎಂದು ‘ಕೈ’ಯನ್ನು ಉದ್ದೇಶಿಸಿ ಬರೆಯಲಾಗಿದೆ. ಈ ಟ್ವೀಟ್‌ಗೆ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಅವರು (ಮೋದಿ) ಒಬ್ಬ ತಾರಾ ಪ್ರಚಾರಕ’ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಬ್ಬರು ‘ಕಾಂಗ್ರೆಸ್‌ ದ್ವೇಷದ ಮತ್ತು ನಕಾರಾತ್ಮಕ ರಾಜಕಾರಣ ಮಾಡುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಹಲವು ತಮಾಷೆಯ, ವ್ಯಂಗ್ಯದ ಪ್ರತಿಕ್ರಿಯೆಗಳು ಈ ಟ್ವೀಟ್‌ಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *