ಆಸಿಫಾ ಹತ್ಯೆಯನ್ನು ಮಾನವೀಯತೆಯಿರುವ ಪ್ರತಿಯೊಬ್ಬರು ಖಂಡಿಸಲೇಬೇಕು: ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್
ನ್ಯೂಸ್ ಕನ್ನಡ ವರದಿ(15-04-2018): ಜಮ್ಮುವಿನ ಕಥುವಾದಲ್ಲಿ ನಡೆದ 8ರ ಹರೆಯದ ಬಾಲಕಿಯನ್ನು ಅತ್ಯಚಾರವೆಸಗಿ ಕೊಲೆಗೈದ ಘಟನೆಯು ಮಾನವೀಯತೆಯಿರುವ ಯಾರೊಬ್ಬನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಇದು ಪ್ರತಿಯೊಬ್ಬರೂ ಖಂಡಿಸಲೇಬೇಕಾದ ದುಷ್ಕ್ರತ್ಯ ಎಂದು ಅಖಿಲ ಭಾರತ ಸುನ್ನೀ ಉಲೆಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.
ಅಸಿಫಾಳನ್ನು ಅತ್ಯಾಚಾರವೆಸಗಿ ಹತ್ಯೆಗೈದ ಘಟನೆಯು 3 ತಿಂಗಳು ಕಳೆದ ಬಳಿಕ ಬೆಳಕಿಗೆ ಬಂದಿದ್ದು, ಆರೋಪಿಗಳಿಂದ ಹಣಪಡೆದು ಅವರನ್ನು ರಕ್ಷಿಸಲು ಪ್ರಯತ್ನಿಸಿದ ಪೋಲೀಸರು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಅವರು ಜಮ್ಮು ಕಾಶ್ಮೀರ ಸರಕಾರವನ್ನು ಒತ್ತಾಯಿಸಿದರು.