ಆಸಿಫಾ ಹತ್ಯೆ ಪ್ರಕರಣದ ಆರೋಪಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ಹೇಮಾ ಮಾಲಿನಿ!

ನ್ಯೂಸ್ ಕನ್ನಡ ವದ(15-04-2018): ಮಕ್ಕಳ ಮೇಲಿನ ಅತ್ಯಾಚಾರವು ನಮ್ಮ ದೇಶದಲ್ಲಿ ಸಾಮಾನ್ಯ ವಿಷಯವಾಗಿ ಬಿಟ್ಟಿದೆ. ಕಥುವಾ ಹಾಗೂ ಉನಾವ್ ಪ್ರಕರಣದ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಬಿಜೆಪಿ ಸಂಸದೆ ಚಿತ್ರನಟಿ ಹೇಮಾ ಮಾಲಿನಿ ಹೇಳಿದ್ದಾರೆ

ಕಥುವಾ ಹಾಗೂ ಉನ್ನಾವ ಪ್ರಕರಣಗಳಲ್ಲಿ ಮಕ್ಕಳನ್ನು ಅತ್ಯಾಚಾರ ಮಾಡಲಾಗಿದೆ. 12 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಅತ್ಯಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ನೀಡಲು ಕಾನೂನಿಗೆ ತಿದ್ದುಪಡಿ ಮಾಡಬೇಕಾಗಿದೆ ಎಂದರು. ಮಕ್ಕಳನ್ನು ಅತ್ಯಚಾರ ಮಾಡುವ ಪ್ರಾಣಿಗಳ ವಿರುದ್ಧ ನಾನು ಆಂದೋಲನವೊಂದನ್ನು ಹಮ್ಮಿಕೊಳ್ಳಲಿದ್ದು, ಮಾಧ್ಯಮಗಳು ಹಾಗೂ ಸಾರ್ವಜನಿಕರು ಬೆಂಬಲಿಸಬೇಕೆಂದು ಕರೆ ನೀಡಿದರು.

ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡುವವರನ್ನು ಮನುಷ್ಯರೆಂದು ಕರೆಯಲು ಸಾಧ್ಯವಿಲ್ಲ. ಅವರು ನಿಜವಾಗಿಯೂ ಪ್ರಾಣಿಗಳಿಗಿಂತಲೂ ಕಡೆಯಾಗಿದ್ದಾರೆ ಎಂದು ಹೇಮಾ ಮಾಲಿನಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *