ಟೀನಾ ದಬಿ- ಅತ್ತರ್ ಅಮೀರ್ ಖಾನ್ ಮದುವೆಯ ಆತಿಥ್ಯದಲ್ಲಿ ಪಾಲ್ಗೊಂಡ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!
ನ್ಯೂಸ್ ಕನ್ನಡ ವರದಿ(15-04-2018): ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಐಎಎಸ್ ಟಾಪರ್ ಟೀನಾ ದಬಿ ಹಾಗೂ ಅತ್ತರ್ ಅಮೀರ್ ಖಾನ್ ಪ್ರೇಮ ವಿವಾಹದ ಆತಿಥ್ಯದಲ್ಲಿ ಪಾಲ್ಗೊಂಡು ದಂಪತಿಗಳಿಗೆ ಶುಭ ಹಾರೈಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ಟೀನಾ ದಬಿ ಹಾಗೂ ಎರಡನೇ ರ್ಯಾಂಕ್ ಪಡೆದಿದ್ದ ಅತ್ತರ್ ಅಮೀರ್ ಖಾನ್ ನಡುವೆ ಸನ್ಮಾನ ಸಮಾರಂಭವೊಂದರಲ್ಲಿ ಪ್ರೇಮಾಂಕುರವಾಗಿತ್ತು. ನಂತರ ಟೀನಾ ದಬಿ ತಾನು ಅತ್ತರ್ ಖಾನ್ ಅವರನ್ನು ಮದುವೆಯಾಗಲಿರುವುದಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದರು. ಇದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ಯಾವ ವಿರೋಧವನ್ನು ಲೆಕ್ಕಿಸದೆ ಟೀನಾ ತಾನು ಪ್ರೀತಿಸಿದ ಯುವಕನನ್ನು ಕೆಲವು ದಿನಗಳ ಹಿಂದೆ ಮದುವೆಯಾಗಿದ್ದರು.
ಕಾಶ್ಮೀರದಲ್ಲಿ ಮದುವೆಯಾದ ನಂತರ ನಿನ್ನೆ ದೆಹಲಿಯಲ್ಲಿ ತಮ್ಮ ಮದುವೆಯ ಆತಿಥ್ಯವನ್ನು ನೀಡಿದ ದಂಪತಿಗಳಿಗೆ ಅನೇಕರು ಶುಭಹಾರೈಸಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿಯ ಪ್ರಮುಖ ನಾಯಕರುಗಳಾದ ಸುಮಿತ್ರ ಮಹಾಜನ್ ಹಾಗೂ ಸಚಿವ ರವಿಶಂಕರ್ ಪ್ರಸಾದ್ ಪಾಲ್ಗೊಂಡಿದ್ದರು.