ಆಸಿಫಾ ಹತ್ಯೆಯನ್ನು ಸಂಭ್ರಮಿಸಿದ್ದ ಸಂಘ ಪರಿವಾರದ ಕಾರ್ಯಕರ್ತನ ವಿರುದ್ಧ ಎಫ್ಐಆರ್!
ನ್ಯೂಸ್ ಕನ್ನಡ ವರದಿ(15-04-2018): ಕಥುವಾದ 8ರ ಹರೆಯದ ಬಾಲಕಿಯ ರೇಪ್ ಆ್ಯಂಡ್ ಮರ್ಡರ್ ಪ್ರಕರಣದಲ್ಲಿ ಸಂಭ್ರಮಿಸಿ ತನ್ನ ಫೇಸ್ ಬುಕ್ ಪೇಜಿನಲ್ಲಿ ಬರೆದಿದ್ದ ಕೇರಳದ ಎರ್ನಾಕುಲಂ ನಿವಾಸಿ ವಿಷ್ಣು ನಂದಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಚ್ಚಿಯ ಕೋಟಕ್ ಮಹೀಂದ್ರಾ ಬ್ಯಾಂಕಿನ ಸಹಾಯಕ ಮ್ಯನೇಜರ್ ಆಗಿದ್ದ ವಿಷ್ಣು ನಂದಕುಮಾರ್, ಅಸಿಫಾಳನ್ನು ಇಷ್ಟು ಸಣ್ಣ ವಯಸ್ಸಿನಲ್ಲೇ ಕೊಂದು ಹಾಕಿದ್ದು ಒಳ್ಳೆಯದಾಯಿತು.ಒಂದು ವೇಳೆ ಆಕೆ ದೊಡ್ಡವಳಾಗುತ್ತಿದ್ದರೆ ಭಾರತದ ಮೇಲೆ ಬಾಂಬ್ ಎಸೆಯುತ್ತಿದ್ದಳು ಎಂದು ತನ್ನ ಫೇಸ್ ಬುಕ್ ಪೇಜಿನಲ್ಲಿ ಬರೆದಿದ್ದ. ಈ ಕುರಿತು ವ್ಯಾಪಕ ಆಕ್ರೋಶ ಉಂಟಾದ ನಂತರ ಬ್ಯಾಂಕ್ ಆತನನ್ನು ಕೆಲಸದಿಂದ ವಜಾ ಮಾಡಿತ್ತು.
ಆರ್ಎಸ್ಎಸ್ ಮೂಲದ ಕುಟುಂಬದವನಾದ ವಿಷ್ಣು ನಂದಕುಮಾರನ ವಿರುದ್ಧ ಪಾಣಂಗಾಡ್ ಠಾಣೆಯಲ್ಲಿ ನಾಲ್ಕು ದೂರು ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ವಿಷ್ಣು ನಂದಕುಮಾರ್ ಬಂಧನಕ್ಕೆ ಪೋಲಿಸರು ಆತನನ್ನು ಹುಡುಕಾಡುತ್ತಿದ್ದಾರೆ.