ಗುಜರಾತ್: ಬಿಜೆಪಿ ನಾಯಕರು ನಮನ ಸಲ್ಲಿಸಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಶುದ್ಧೀಕರಿಸಿದ ದಲಿತರು!
ನ್ಯೂಸ್ ಕನ್ನಡ ವರದಿ(15-04-2018): ಅಂಬೇಡ್ಕರ್ ಜಯಂತಿ ದಿನದಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಇನ್ನಿತರ ಬಿಜೆಪಿ ನಾಯಕರು ನಮನ ಸಲ್ಲಿಸಿ ಮಾಲಾರ್ಪಣೆ ಮಾಡಿದ್ದ ವಡೋದರದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳೀಯ ದಲಿತರು ಸೇರಿ ಶುದ್ಧೀಕರಿಸಿದ ಘಟನೆ ವರದಿಯಾಗಿದೆ.
ಕೆಲವು ತಿಂಗಳ ಹಿಂದೆ ಪ್ರಕಾಶ್ ರೈ ಈ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಬಿಜೆಪಿಯ ಕಾರ್ಯಕರ್ತರು ಇದೇ ಅಂಬೇಡ್ಕರ್ ಪ್ರತಿಮೆಯನ್ನು ಶುದ್ಧೀಕರಣಗೊಳಿಸಿದ್ದರು.ಅಂಬೇಡ್ಕರ್ ಪ್ರತಿಮೆಗೆ ನಮನ ಸಲ್ಲಿಸಲು ಆಗಮಿಸುತ್ತಿದ್ದಂತೆಯೇ ಬಿಜೆಪಿ ನಾಯಕರ ವಿರುದ್ಧ ದಲಿತ ಸಮುದಾಯದ ಹಲವರು ಧಿಕ್ಕಾರ ಕೂಗಿದ್ದಲ್ಲದೆ, ಕಾರ್ಯಕ್ರಮದ ನಂತರ ಅವರು ವಾಪಸ್ಸಾಗುತ್ತಿದ್ದಂತೆಯೇ, ಅಂಬೇಡ್ಕರ್ ಪ್ರತಿಮೆಯನ್ನು ಹಾಲಿನಿಂದ ತೊಳೆದು ಶುದ್ಧೀಕರಿಸಿದ್ದಾರೆ.
ಬಿಜೆಪಿ ನಾಯಕರು ನಮನ ಸಲ್ಲಿಸಿದ್ದಕ್ಕಾಗಿ ಆ ಪ್ರತಿಮೆ ಅಪವಿತ್ರವಾಗಿದೆ, ಆದ್ದರಿಂದ ಹಾಲು ಹಾಕಿ ಶುದ್ಧೀಕರಿಸಿದ್ದೇವೆ ಎಂದು ದಲಿತರು ಹೇಳಿದ್ದಾರೆ