ಯಡಿಯೂರಪ್ಪ ನನ್ನ ರಾಜಕೀಯ ತಂದೆ: ಯೂ ಟರ್ನ್ ಹೊಡೆದ ಕೆಜೆಪಿ ಅಧ್ಯಕ್ಷ ಪದ್ಮನಾಭ ಪ್ರಸನ್ನ!

ನ್ಯೂಸ್ ಕನ್ನಡ ವರದಿ(15-04-2018): ನಾನು ರಾಜಕೀಯವಾಗಿ ಬೆಳೆಯಲು ಯಡಿಯೂರಪ್ಪ ಕಾರಣ. ನನ್ನ ರಾಜಕೀಯದ ತಂದೆ ಯಡಿಯೂರಪ್ಪ ಅವರು ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಅವರು ಹೇಳುವುದರೊಂದಿಗೆ ಯೂ ಟರ್ನ್ ಹೊಡೆದಿದ್ದಾರೆ.

ಸದಾ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಟೀಕೆ ಮಾಡುತ್ತಿದ್ದ ಪ್ರಸನ್ನ ಕುಮಾರ್, ಯಡಿಯೂರಪ್ಪ ನನ್ನ ಗಾಡ್ ಫಾದರ್. ನನ್ನ ಇಂದಿನ ರಾಜಕೀಯ ಬೆಳವಣಿಗೆಗೆ ಯಡಿಸೂರಪ್ಪ ಕಾರಣ. ನನ್ನ ತಂದೆ ನಂಜುಂಡಪ್ಪ ಹಾಗೂ ನನ್ನ ರಾಜಕೀಯ ತಂದೆ ಯಡಿಯೂರಪ್ಪ ಎಂದು ಹೇಳಿದರು.

ಕೆಜೆಪಿ 224 ಸ್ಥಾನಗಳಲ್ಲೂ ಸ್ಪರ್ಧಿಸಲಿದ್ದು, 25 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗುವುದೆಂದರು. ಯಡಿಯೂರಪ್ಪನವರನ್ನು ನನಗೆ ಮರೆಯಲು ಸಾಧ್ಯವಿಲ್ಲ. ನಾನು ನಿಮ್ಮೆದುರಿನಲ್ಲಿ ಕುಳಿತಿರುವುದು ಯಡಿಯೂರಪ್ಪ ನನಗೆ ನೀಡಿದ ರಾಜಕೀಯ ಬಿಕ್ಷೆಯಾಗಿದೆ ಎಂದರು.

Leave a Reply

Your email address will not be published. Required fields are marked *