ಮುಂಬೈ ಇಂಡಿಯನ್ಸ್ ಮ್ಯಾಚ್ ಸೋತರೂ, ಪ್ರೇಕ್ಷಕರ ಮನಗೆದ್ದ ಹಾರ್ದಿಕ್ ಪಾಂಡ್ಯ ಕ್ಯಾಚ್!
ನ್ಯೂಸ್ ಕನ್ನಡ ವರದಿ(15-04-2018): ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮ್ಯಾಚ್ ಸೋತಿರಬಹುದು ಆದರೆ ಹಾರ್ದಿಕ್ ಪಾಂಡ್ಯ ಹಿಡಿದ ಕ್ಯಾಚ್ ಗೆದ್ದಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದರೂ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮ್ಯಾಕ್ಸ್ ವೆಲ್ ಹೊಡೆದ ಬಾಲ್ ನ್ನು ಬೌಂಡರಿ ಲೈನ್ ನಲ್ಲಿ ಸುಮಾರು 15 ಯಾರ್ಡ್ ನಷ್ಟು ದೂರಕ್ಕೆ ಹಾರಿ ಡೈವ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಆ ಕ್ಯಾಚ್ ಹಿಡಿದಿದ್ದರು. ಹಾರ್ದಿಕ್ ಪಾಂಡ್ಯ ಹಿಡಿದ ಕ್ಯಾಚನ್ನು ನೋಡಿ ಪ್ರಕ್ಷಕರು ನಿಬ್ಬೆರಗಾಗಿದ್ದರು.
ಈ ಕ್ಯಾಚ್ ನಿಂದಾಗಿ ಮುಂಬೈ ಇಂಡಿಯನ್ಸ್ ಮ್ಯಾಚ್ ಗೆಲ್ಲದಿದ್ದರೂ ಹಾರ್ದಿಕ್ ಪಾಂಡ್ಯ ಹಿಡಿದ ಕ್ಯಾಚ್ ಮಾತ್ರ ಎಲ್ಲರ ಮನಗೆದ್ದಿದೆ.