ಐಪಿಎಲ್ನ ಇಂದಿನ ಪಂದ್ಯದಲ್ಲಿ ಆರ್ಸಿಬಿ ಹಸಿರು ಜರ್ಸಿಯಲ್ಲಿ ಕಾಣಿಸಲಿದೆ! ಕಾರಣವೇನು ಗೊತ್ತೇ?
ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಕೆಲ ವರ್ಷಗಳಿಂದ ಒಂದು ಪಂದ್ಯದಲ್ಲಿ ಹಸಿರು ಬಣ್ಣದ ಜರ್ಸಿಯೊಂದಿಗೆ ಕಣಕ್ಕಿಳಿಯುತ್ತದೆ. ಆರ್ಸಿಬಿ ಪಾಲಿಸಿಕೊಂಡು ಬಂದಿರುವ ನಮ್ಮ ಸುತ್ತಮುತ್ತಲಿನ ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾಳಜಿ ಹುಟ್ಟಿಸುವ, ‘ಗೋ ಗ್ರೀನ್’ ಅಭಿಯಾನ ಈ ಆವೃತ್ತಿಯಲ್ಲೂ ಮುಂದುವರಿಯಲಿದ್ದು, ಇಂದಿನ ಪಂದ್ಯಕ್ಕೆ ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.
ಈ ಪಂದ್ಯದಲ್ಲಿ ಎಲ್ಲಾ ಆಟಗಾರರ ಜೆರ್ಸಿ ಹಿಂದೆ ಅವರ ಹೆಸರುಗಳ ಬದಲಾಗಿ ಟ್ವೀಟರ್ ಹ್ಯಾಂಡಲ್ ಇರಲಿದೆ. ಟಾಸ್ ವೇಳೆ ಆರ್ಸಿಬಿ ನಾಯಕ ಕೊಹ್ಲಿ, ಎದು ರಾಳಿ ನಾಯಕನಿಗೆ ಗಿಡವೊಂದನ್ನು ಉಡುಗೊರೆಯಾಗಿ ನೀಡಿ ಹಸಿರು ಉಳಿಸಲು ಕೈಜೋಡಿಸುವಂತೆ ಮನವಿ ಮಾಡಲಿದ್ದಾರೆ. ಹಸಿರು ಜೆರ್ಸಿಯಲ್ಲಿ ಆಡಿದಾಗ ಆರ್ಸಿಬಿ ಉತ್ತಮ ದಾಖಲೆ ಹೊಂದಿದೆ. 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿಡಿ ಹಾಗೂ ವಿರಾಟ್ ಕೊಹ್ಲಿ ಎರಡನೇ ವಿಕೆಟ್’ಗೆ 229 ರನ್’ಗಳ ಜತೆಯಾಟವಾಡಿದ್ದರು. ಇನ್ನು ಈ ಇಬ್ಬರು ಆಟಗಾರರು ಶತಕ ಸಿಡಿಸಿ ಗಮನ ಸೆಳೆದಿದ್ದರು.