ಅನಾರೋಗ್ಯದಿಂದ ಸುಧಾರಿಸಿಕೊಂಡು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಅರುಣ್ ಜೇಟ್ಲಿ!

ಹಣಕಾಸು ಸಚಿವರಿಂದ ರಾಜ್ಯಸಭೆ ಸದಸ್ಯರಾಗಿ ಪ್ರಯಾಣ : ಅರುಣ್ ಜೆಟ್ಲಿ ಪ್ರಮಾಣ ವಚನ

ನ್ಯೂಸ್ ಕನ್ನಡ ವರದಿ : ರಾಜ್ಯಸಭೆ ಚುನಾವಣೆ ನಂತರ ರಾಜ್ಯಸಭೆಯ ನಾಯಕರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ರವರು ತಮ್ಮ ಅನಾರೋಗ್ಯದ ಹಿನ್ನಲೆಯಲ್ಲಿ ಮೇಲ್ಮನೆಯ ಇತರ ಸದಸ್ಯರ ಜೊತೆಗೆ ಪ್ರಮಾಣವಚನ ಸ್ವೀಕರಿಸಿರಲಿಲ್ಲ. ಉತ್ತರ ಪ್ರದೇಶದಿಂದ ಕಳೆದ ತಿಂಗಳಷ್ಟೇ ಸಂಸತ್‌ನ ಮೇಲ್ಮನೆಗೆ ಆಯ್ಕೆಯಾಗಿರುವ 65 ವಷ೯ ಪ್ರಾಯದ ಸಚಿವ ಅರುಣ್ ಜೇಟ್ಲಿ ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ರವರ ಕಚೇರಿಯಲ್ಲಿ ವಿಶೇಷ ಸಮಾರಂಭದಲ್ಲಿ, ಮುಂದಿನ 6 ವರ್ಷಗಳ ಅವಧಿಗೆ ಭಾನುವಾರದಂದು ಪ್ರಮಾಣ ವಚನ ಸ್ವೀಕರಿಸಿದರು.

ಈ ವಿಶೇಷ ಸಮಾರಂಭದಲ್ಲಿ ರಾಜ್ಯಸಭೆ ಸದಸ್ಯರಾದ ಭೂಪೇಂದ್ರ ಯಾದವ್, ಜಗದಾಂಬಿಕಾ ಪಾಲ್, ಕಾನ್ರಾಡ್ ಸಂಗ್ಮಾ (ಪ್ರಸ್ತುತ ಮೇಘಾಲಯ ಮುಖ್ಯಮಂತ್ರಿ) ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಹಾಗೂ ಹಲವರು ಉಪಸ್ಥಿತರಿದ್ದರು. ಮೂತ್ರಕೋಶ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಅರುಣ್ ಜೆಟ್ಲಿ ರವರು, ಏಪ್ರಿಲ್ 9 ರಂದು ಎಐಐಎಂನಲ್ಲಿ ಡಯಾಲಿಸಿಸ್‌ಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದರು. ಈ ಹಿಂದೆ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Leave a Reply

Your email address will not be published. Required fields are marked *