ಕಾಪು: ಒವರ್ ಟೇಕ್ ಮಾಡುವ ಭರದಲ್ಲಿ ಡಿವೈಡರ್ ಮೇಲೇರಿದ ಬಸ್ಸು
ನ್ಯೂಸ್ ಕನ್ನಡ ವರದಿ ಕಾಪು : ಎರಡು ಬಸ್ಸುಗಳ ನಡುವಿನ ಒವರ್ ಟೇಕ್ ಭರದಿಂದ ಕೆಎಸ್ಆರ್ ಟಿಸಿ ಬಸ್ಸೊಂದು ಹೆದ್ದಾರಿ ಡಿವೈಡರ್ ಮೇಲೇರಿದ ಘಟನೆ ಕಾಪು ಸಮೀಪದ ಕೊಪ್ಪಲಂಗಡಿ ಬಳಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು -ಉಡುಪಿ ಚುತುಷ್ಪತ ರಸ್ತೆಯ ಕೊಪ್ಪಲಂಗಡಿಯಲ್ಲಿ ಮಂಗಳೂರಿನಿಂದ ಉಡುಪಿಯತ್ತ ಚಲಿಸುತ್ತಿದ್ದ ತಡೆರಹಿತ ಬಸ್ಸುಗಳ ಒವರ್ ಟೇಕ್ ಭರದಿಂದ ಒಂದಕ್ಕೊಂದು ಡಿಕ್ಕಿಯಾಗಿ ಕೆಎಸ್ ಆರ್ ಟಿಸಿ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೇರಿ ಸುಮಾರು ನೂರು ಮೀಟರ್ ದೂರಕ್ಕೆ ಚಲಿಸಿ ಸೂಚನಾ ಫಲಕಕ್ಕೆ ಡಿಕ್ಕಿಯಾಗಿ ನಿಂತಿದೆ.
ಘಟನೆಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೊಲೀಸರು ದಾವಿಸಿ ತನಿಖೆ ನಡೆಸಿದ್ದಾರೆ.