ಮಅದನಿಯನ್ನು ಒಂದೋ ಬಿಟ್ಟು ಬಿಡಿ; ಇಲ್ಲವೇ ನೇಣುಗಂಬಕ್ಕೇರಿಸಿ: ಕೇರಳದ ಸಚಿವ ಕೆ.ಟಿ.ಜಲೀಲ್

ನ್ಯೂಸ್ ಕನ್ನಡ ವರದಿ(15-04-2018): ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಡಿಪಿ ನಾಯಕ ಅಬ್ದುಲ್ ನಾಸರ್ ಮಅದನಿಗೆ ಕರ್ನಾಟಕ ಸರಕಾರವು ಚಿತ್ರಹಿಂಸೆ ನೀಡುತ್ತಿದೆ. ದೈಹಿಕವಾಗಿ ಕುಗ್ಗಿ ಹೋದ ಮಅದನಿಯವರನ್ನು ಒಂದೋ ಬಿಟ್ಟುಬಿಡಿ ಅದಲ್ಲವಾದರೆ ಅವರನ್ನು ನೇಣುಗಂಬಕ್ಕೆ ಏರಿಸಿ ಎಂದು ಕೇರಳದ ಸ್ಥಳಿಯಾಡಳಿತ ಸಚಿವ ಕೆ.ಟಿ.ಜಲೀಲ್ ತನ್ನ ಫೇಸ್ ಬುಕ್ ಪೇಜಿನಲ್ಲಿ ಬರೆದಿದ್ದಾರೆ.

ಮಅದನಿಗೆ ಈ ರೀತಿಯ ಚಿತ್ರಹಿಂಸೆಯನ್ನು ನೀಡುವುದಕ್ಕಿಂತ ಅವರಗೆ ಗಲ್ಲು ಶಿಕ್ಷೆ ಕೊಡುವುದು ಲೇಸು. ಮಅದನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಆದರೆ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ ಎಂದು ಹೇಳಿದ್ದಾರೆ. ಕರ್ನಾಟಕ ಸರಕಾರ ಅವರ ವಿಷಯದಲ್ಲಿ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ಜೀವನ ಮತ್ತು ಮರಣ ನಡುವಿನ ಚಿತ್ರಹಿಂಸೆ ಅಸಹನೀಯವಾಗಿದೆ ಎಂದು ಜಲೀಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಮದನಿಯನ್ನು ಜಲೀಲ್ ಭೇಟಿ ಮಾಡಿದ್ದರು. ಮದನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಆದರೆ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *