ಯೋಗಿ ಕುರಿತು ತಮ್ಮ ವಿವಾದಾತ್ಮಕ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ದಿನೇಶ್ ಗುಂಡುರಾವ್!

ನ್ಯೂಸ್ ಕನ್ನಡ ವರದಿ : ಉತ್ತರಪ್ರದೇಶದ ಪ್ರಕರಣಗಳ ಹಿನ್ನೆಲೆಯಲ್ಲಿ, ದಿನೇಶ್ ಗುಂಡುರಾವ್ ರವರು ಯೋಗಿ ಆದಿತ್ಯಾನಾಥ್ ವಿರುದ್ಧ ಅವನು ಕರ್ನಾಟಕಕ್ಕೆ ಬರುವುದರಿಂದ ನಾಡಿಗೆ ಅಪಮಾನವಾಗಲಿದ್ದು, ಅವನು ಮತ್ತೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಏಕವಚನದಲ್ಲಿ ಅವಹೇಳನಕಾರಿ ಮಾತಗಳನ್ನಾಡಿದ್ದರು. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಗುಂಡುರಾವ್ ರವರು ತಾವು ಯೋಗಿ ಆದಿತ್ಯನಾಥ್ ವಿರುದ್ಧ ಹಾಗೆ ಮಾತನಾಡಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಉದ್ದೇಶಪೂರ್ವಕವಾಗಿ ನಾನು ಇಂತಹ ಹೇಳಿಕೆ ನೀಡಿಲ್ಲ. ಆವೇಶದಲ್ಲಿ ಆಡಿದ ಮಾತು ಅದು ಎಂದು ಸ್ಪಷ್ಟನೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ನ್ಯಾಯ ಸಿಗುತ್ತಿಲ್ಲ. ಆಕೆಯ ಕುಟುಂಬದವರ ಮೇಲೆಯೇ ದೌರ್ಜನ್ಯ ನಡೆಯುತ್ತಿದೆ. ಈ ಸಂಬಂಧ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಇಂತಹ ಹೇಳಿಕೆ ನೀಡಿದ್ದೆ. ಆದರೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಬಗ್ಗೆ ಮಾತನಾಡುವುದಿಲ್ಲ. ಅವರಂತಹ ಕೀಳುಮಟ್ಟದ ರಾಜಕಾರಣಿ ಬೇರೊಬ್ಬರಿಲ್ಲ. ಯೋಗಿ ಆದಿತ್ಯನಾಥ್ ಬಗ್ಗೆ ನಾನು ಭಾವೋದ್ವೇಗದಿಂದ ಮಾತನಾಡಿದ್ದೆ. ಆದರೆ ಪ್ರತಾಪ್ ಸಿಂಹ ಯೋಚಿಸಿ ಹೀಗೆ ಮಾತನಾಡುವುದು ಸರಿಯಲ್ಲ. ಅವರದ್ದು ಕೊಳಕು ಮನಸ್ಸು ಎಂದು ಹೇಳಿದ್ದಾರೆ.

ಯೋಗಿ ಆದಿತ್ಯನಾತ್ ವಿರುದ್ಧ ಹಲವು ಪ್ರಕರಣಗಳಿವೆ. ಆದರೆ ಅವರು ರಾಜ್ಯಕ್ಕೆ ಬಂದಾಗ ನಮ್ಮ ಮುಖ್ಯಮಂತ್ರಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಯೋಗಿ ಸ್ವಾಮೀಜಿ ಅಲ್ಲ, ರಾಜಕಾರಣಿ. ಯುಪಿ ಸರ್ಕಾರ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅವರ ಬಗ್ಗೆ ಚಕಾರ ಎತ್ತುತ್ತಿಲ್ಲ. ಅತ್ಯಾಚಾರಿಗಳ ವಿರುದ್ಧ ಪ್ರತಿಭಟಿಸಲಿಲ್ಲ. ಆದಿತ್ಯನಾಥ್ ಸರ್ಕಾರದ ಕೆಲಸ ಸರಿ ಇದೆಯಾ ಅಂತ ಬಿಜೆಪಿ ರಾಜ್ಯ ನಾಯಕರು ತಿಳಿಸಲಿ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂಬುದೇ ನಮ್ಮ ಪರಮ ಉದ್ದೇಶ ಎಂದಿದ್ದಾರೆ.

Leave a Reply

Your email address will not be published. Required fields are marked *