ಸ್ವಂತ ಮಗನನ್ನೇ ₹1ಲಕ್ಷ ಸುಪಾರಿ ನೀಡಿ ಕೊಲ್ಲಿಸಿದ ತಾಯಿ! ಕಾರಣವೇನು ಗೊತ್ತೇ?

ಹಣದ ಆಸೆ ಎನನ್ನೆಲ್ಲಾ ಮಾಡಿಸುತ್ತೆ ಅನ್ನುವುದಕ್ಕೆ ಇದೊಂದು ಉದಾಹರಣೆ. ಆಸ್ತಿಯ ಆಸೆಗಾಗಿ ತಂದೆ ತಾಯಿಯನ್ನು ಕೊಂದ ಮಕ್ಕಳನ್ನು ನೋಡಿದ್ದೀರಾ, ಆದರೆ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಅಳಿಯ ಜತೆ ಸೇರಿ ಮಗನ ಹತ್ಯೆಗೆ ತಾಯಿಯೇ ಸುಪಾರಿ ಕೊಟ್ಟಿದ್ದ ಘಟನೆ ರಾಜಸ್ತಾನದಲ್ಲಿ ನಡೆದಿದೆ.

ಮೃತನನ್ನು 21 ವರ್ಷದ ಮೋಹಿತ್ ಎಂದು ಗುರುತಿಸಲಾಗಿದೆ. ಪ್ರತಾಪಗಢ ಜಿಲ್ಲೆಯ ಚೋಟಿ ಸಾದ್ರಿಯಲ್ಲಿ ಈ ಘಟನೆ ನಡೆದಿದ್ದು ಮಗನ ಹತ್ಯೆಗಾಗಿ ಹಂತಕರಿಗೆ ತಾಯಿ 1 ಲಕ್ಷ ರುಪಾಯಿ ಸುಪಾರಿ ನೀಡಿದ್ದು ತನಿಖೆ ವೇಳೆ ಪೊಲೀಸರು ಈ ವಿಷಯವನ್ನು ಪತ್ತೆ ಹಚ್ಚಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಪ್ರಿಲ್ 7ರಂದು ನಿಂಬಾಹೇದ ರಾಷ್ಟ್ರೀಯ ಹೆದ್ದಾರಿ 113ರಲ್ಲಿ ಪೊಲೀಸರಿಗೆ ಮೃತದೇಹ ಬಿದ್ದಿರುವ ಮಾಹಿತಿ ಸಿಕ್ಕಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದು ಈ ವೇಳೆ ತಾಯಿಯೇ ಮಗನ ಹತ್ಯೆಗೆ ಸುಪಾರಿ ನೀಡಿದ್ದು ಈ ಸಂಬಂಧ ತಾಯಿ ತಾಯಿ ಪ್ರೇಮಲತಾ ಸುತಾರ್, ಅಳಿಯ ಕೃಷ್ಣ ಸುತಾರ್, ಮಹದೇವ್ ದಖಡ್ ಮತ್ತು ಗಣಪತ್ ಸಿಂಗ್ ನನ್ನು ಬಂಧಿಸಿದ್ದಾರೆ.

ಮೋಹಿತ್ ತಂದೆ ಸತ್ತ ನಂತರ ಡ್ರಗ್ಸ್ ಗೆ ದಾಸನಾಗಿದ್ದು ದುಡ್ಡಿಗಾಗಿ ತಾಯಿಯನ್ನು ಪೀಡಿಸುತ್ತಿದ್ದ ಅಲ್ಲದೆ ಹಲವು ಬಾರಿ ಹಲ್ಲೆಯನ್ನು ಸಹ ಮಾಡಿದ್ದ. ಇದರಿಂದ ನೊಂದ ತಾಯಿ ಮಗಳು ಹಾಗೂ ಅಳಿಯನ ಮನೆಯಲ್ಲಿ ತಂಗಿದ್ದರು.
ಇನ್ನು ಪ್ರೇಮಲತಾ ಅವರು ತಮಗಿದ್ದ ಸಣ್ಣ ಪ್ರಮಾಣದ ಆಸ್ತಿಯನ್ನು ಮಾರಲು ಮುಂದಾಗಿದ್ದರು. ಈ ವಿಷಯ ತಿಳಿದ ಮೋಹಿತ್ ಇದಕ್ಕೆ ಒಪ್ಪದಿದ್ದಾಗ ಮಗನ ಹತ್ಯೆಗೆ ಡಾಬಾ ನಡೆಸುತ್ತಿದ್ದ ಸುಪಾರಿ ಹಂತಕರಿಗೆ ಸುಪಾರಿ ನೀಡಿದ್ದರು. ಮುಂಗಡವಾಗಿ 50 ಸಾವಿರ ರುಪಾಯಿಯನ್ನು ಪ್ರೇಮಲತಾ ನೀಡಿದ್ದರು.

ಕಳೆದ ಏಪ್ರಿಲ್ 6ರಂದು ಅದೇ ಡಾಬಾಗೆ ಮೋಹಿತ್ ಊಟಕ್ಕೆ ಹೋಗಿದ್ದಾಗ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿಕೊಂಡಿದ್ದರು. ನಂತರ ಕುಡಿಯಲು ಬಿಯರ್ ಸಹ ನೀಡಿದ್ದರು. ಕುಡಿದು ಚನ್ನಾಗಿ ಟೈಟ್ ಆಗಿದ್ದ ಮೋಹಿತ್ ಬೈಕ್ ಹತ್ತಿ ಹೋಗುತ್ತಿದ್ದಾಗ ಆತನನ್ನು ಹಿಂಬಾಲಿಸಿದ ಗಣಪತಿ ಸಿಂಗ್ ಹಾಗೂ ಮಹದೇವ್ ಇಬ್ಬರು ನಿರ್ಜನ ಪ್ರದೇಶದಲ್ಲಿ ಆತನ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *