ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಬಿಡುಗಡೆ?

ನ್ಯೂಸ್ ಕನ್ನಡ ವರದಿ-(16.04.18): ಕಾಂಗ್ರೆಸ್‌ ಪಟ್ಟಿ ಎದುರು ನೋಡುತ್ತಿದ್ದ ಬಿಜೆಪಿ ಎರಡನೇ ಪಟ್ಟಿ ಸಿದ್ಧಪಡಿಸುವ ಸಂಬಂಧ ದಿಲ್ಲಿಯಲ್ಲಿ ರವಿವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ 80 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿತು. ಸೋಮವಾರ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಮೊದಲ ಪಟ್ಟಿಯಿಂದ ಉಂಟಾಗಿರುವ ಬಂಡಾಯದ ಬಗ್ಗೆ ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಟಿಕೆಟ್‌ ವಂಚಿತ ಕೆಲವು ಕಾಂಗ್ರೆಸ್‌ ನಾಯಕರು ಬಿಜೆಪಿ ಸಂಪರ್ಕ ದಲ್ಲಿದ್ದಾರೆ ಎಂದು ಹೇಳಲಾಗಿದೆ. ಕೋಲಾರದ ವಿ.ಆರ್‌. ಸುದರ್ಶನ್‌, ಪುಲಕೇಶಿನಗರದ ಪ್ರಸನ್ನಕುಮಾರ್‌ ಸಹಿತ ಟಿಕೆಟ್‌ ತಪ್ಪಿರುವ ಹಾಲಿ ಶಾಸಕರಲ್ಲಿ ಹಲವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿಕೊಂಡವರು ಬಹುತೇಕ ಕಡೆ ಬಂಡಾಯಗಾರರಾಗಿ ಸ್ಪರ್ಧೆ ಮಾಡುವ ಸಾಧ್ಯತೆಯೂ ಇರುವುದರಿಂದ ಆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ನೋಡಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *