ನಾನೆಷ್ಟು ದಿನ ಬದುಕಿರುತ್ತೇನೆಂದು ನನಗೆ ಗೊತ್ತಿಲ್ಲ, ನಿನ್ನೆಯಷ್ಟೇ ಬೆದರಿಕೆ ಬಂದಿದೆ: ಆಸೀಫಾ ಪರ ವಕೀಲೆ ದೀಪಿಕಾ

ನ್ಯೂಸ್ ಕನ್ನಡ ವರದಿ-(16.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಈ ಪ್ರಕರಣದಲ್ಲಿ ಸಂತ್ರಸ್ತೆಯ ಪರ ವಕಾಲತ್ತು ವಹಿಸಲು ಯಾರೂ ಮುಂದೆ ಬಂದಿರಲಿಲ್ಲ. ಆದರೆ ದೀಪಿಕಾ ರಜಾವತ್ ಎಂಬ ವಕೀಲೆಯೊಬ್ಬರು ಮುಂದೆ ಬಂದಿದ್ದರು. ಇದೀಗ ಈ ಕುರಿತು ಮಾತನಾಡಿರುವ ದೀಪಿಕಾ, ನನ್ನ ಪ್ರಾಣ ಅಪಾಯದಲ್ಲಿದೆ ಎಂದು ತಿಳಿಸಿದ್ದಾರೆ.

“ನಾನು ಎಷ್ಟು ದಿನ ಬದುಕಿರುತ್ತೇನೆಂದು ನನಗೆ ಗೊತ್ತಿಲ್ಲ. ನಿನ್ನೆಯಷ್ಟೇ ನನಗೆ ಬೆದರಿಕೆ ಹಾಕಲಾಗಿದೆ. ನನ್ನ ಜೀವ ಅಪಾಯದಲ್ಲಿದೆ ಎಂದು ನಾನು ಸುಪ್ರೀಮ್ ಕೋರ್ಟ್ ಗೆ ತಿಳಿಸುತ್ತಿದ್ದೇನೆ. ನಾನು ಜಮ್ಮು ವಕೀಲರ ಸಂಘದ ಸದಸ್ಯೆಯಲ್ಲ. ಆದರೂ ಕೂಡಾ ಜಮ್ಮು ವಕೀಲ ಸಂಘದ ಅಧ್ಯಕ್ಷ ಬಿ.ಎಸ್. ಸ್ಲಾತಿಯಾ ನನಗೆ ಬೆದರಿಕೆ ಹಾಕಿದ್ದಾರೆ ಮಾತ್ರವಲ್ಲದೇ ಈ ಪ್ರಕರಣದಿಂದ ಹಿಂದೆ ಸರಿಯುವಂತೆ ತಿಳಿಸಿದ್ದಾರೆ. ನನ್ನನ್ನು ಕೂಡಾ ಅತ್ಯಾಚಾರಗೈದು ಕೊಲೆ ಮಾಡಬಹುದು. ಆದರೆ ನಾನು ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವುದಿಲ್ಲ. ನಾನು ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *