ಉನ್ನಾವ್ ಅತ್ಯಾಚಾರ ಪ್ರಕರಣ: ಸಾಕ್ಷಿ ಹೇಳಬಾರದೆಂದು ಬೆದರಿಕೆ ಹಾಕುತ್ತಿರುವ ಆರೋಪಿ ಬಿಜೆಪಿ ಶಾಸಕ ಪರ ಗೂಂಡಾಗಳು!

ನ್ಯೂಸ್ ಕನ್ನಡ ವರದಿ-(14.04.18): ಬಾಲಕಿಯೋರ್ವಳ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತು ಆತನ ಬೆಂಬಲಿಗರು ಸಾಮೂಹಿಕ ಅತ್ಯಾಚಾರ ಮಾಡಿದ್ದರೆಂದು ಯೋಗಿ ಆದಿತ್ಯನಾಥ್ ಕಚೇರಿಯ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಾಲಕಿಯ ತಂದೆಯನ್ನೂ ಲಕಪ್ ಡೆತ್ ಹೆಸರಿನಲ್ಲಿ ಕೊಲ್ಲಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಕೂಡಾ ಸಾಕ್ಷಿ ಹೇಳಬಾರದೆಂದು ಗ್ರಾಮಸ್ಥರಿಗೆ ಬಿಜೆಪಿ ಶಾಸಕನ ಪರ ಗೂಂಡಾಗಳು ಬೆದರಿಕೆ ಹಾಕಿದ ಘಟನೆಯು ತಿಳಿದು ಬಂದಿದೆ.

ಈ ಪ್ರಕರಣದ ಕುರಿತಾದಂತೆ ಸಂತ್ರಸ್ತೆಯ ಚಿಕ್ಕಪ್ಪ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಇದೀಗ ಬೆದರಿಕೆ ಹಾಕಲಾಗಿದ್ದು, “ಬಿಜೆಪಿ ಶಾಸಕ ಸೆಂಗರ್ ನ ಬೆಂಬಲಿಗರು ಕಾರುಗಳಲ್ಲಿ ಗ್ರಾಮಕ್ಕೆ ಬಂದು ಪ್ರತಿಯೊಬ್ಬರಿಗೂ ಬೆದರಿಕೆ ಹಾಕುತ್ತಿದ್ದಾರೆ. ಈಗಾಗಲೇ ನನ್ನ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ. ಗ್ರಾಮಸ್ಥರನ್ನೆಲ್ಲಾ ಊರಿನಿಂದಲೇ ಹೊರ ಹಾಕುತ್ತೇನೆಂದು ಬೆದರಿಸುತ್ತಿದ್ದಾರೆ ಎಂದು ಬಾಲಕಿಯ ಚಿಕ್ಕಪ್ಪ ಮುಸುಕು ಹಾಕಿಕೊಂಡೇ ಮಾಧ್ಯಮಗಳ ಜೊತೆ ಮಾತನಾಡಿ ಈ ವಿಷಯವನ್ನು ತಿಳಿಸಿದ್ದಾರೆ. ಆರೋಪಿ ಬಿಜೆಪಿ ಶಾಸಕ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

Leave a Reply

Your email address will not be published. Required fields are marked *