ಆಸಿಫಾ ಅತ್ಯಾಚಾರಿಗಳನ್ನು ಬೆಂಬಲಿಸುವ ಮೂಲಕ ಬಿಜೆಪಿಯು ದೇಶದಲ್ಲಿ ವಿಷದ ವಾತವರಣವನ್ನು ಸೃಷ್ಟಿಸುತ್ತಿದೆ: ರಾಜ್ ಠಾಕ್ರೆ

ನ್ಯೂಸ್ ಕನ್ನಡ ವರದಿ(16-04-2018): ಅತ್ಯಾಚಾರಿಗಳಿಗೆ ಬೆಂಬಲ ಸೂಚಿಸುವ ಮೂಲಕ ಬಿಜೆಪಿ ಪಕ್ಷವು ದೇಶದಲ್ಲಿ ವಿಷದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸಂಸ್ಥಾಪಕ ರಾಜ್ ಠಾಕ್ರೆ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಮುಂಬೈಯ ಮುಳುಂದ್ ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ ಠಾಕ್ರೆ “ ಈ ದೇಶದಲ್ಲಿ ಏನಾಗುತ್ತಿದೆಯೆಂದೇ ಅರ್ಥವಾಗುತ್ತಿಲ್ಲ. ಇನ್ನೂ ಪ್ರಪಂಚವನ್ನು ಅರಿಯದ 8ರ ಹರೆಯದ ಬಾಲಕಿಯನ್ನು ಮೃಗೀಯವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಗುತ್ತಿದೆ. ಪ್ರಕರಣವನ್ನು ಖಂಡಿಸುವ ಬದಲು ಆರೋಪಿಗಳಿಗೆ ಬೆಂಬಲ ನೀಡುವ ಮೂಲಕ ಬಿಜೆಪಿ ಪಕ್ಷವು ದೇಶದಲ್ಲಿ ವಿಷದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ” ಎಂದು ವಿಷಾದಿಸಿದರು.

ಬಿಜೆಪಿ ನೇತ್ರತ್ವದ ಕೇಂದ್ರ ಕೇಂದ್ರ ಸರಕಾರವು ಚುನಾವಣೆಗೋಸ್ಕರ ಹಿಂದೂ ಮುಸಲ್ಮಾನರ ನಡುವೆ ಗಲಭೆ ಸೃಷ್ಟಿಸಲು ಪ್ರತ್ನಿಸುತ್ತಿದೆ. ಒಂದು ವೇಳೆ ಕೇಂದ್ರ ಸರಕಾರಕ್ಕೆ ಧೈರ್ಯವಿದ್ದರೆ ಭಾರತದಲ್ಲಿ ವಾಸಿಸುತ್ತಿರುವ ಪಾಕ್ ಹಾಗೂ ಬಾಂಗ್ಲಾ ಪ್ರಜೆಗಳನ್ನು ಹೊರಹಾಕಲಿ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *