ನೌಹೀರಾ ಶೇಖ್ ರ ಎಂಇಪಿ ಮತ್ತು ಬಿಜೆಪಿ ಪಕ್ಷದ ಪ್ರಚಾರ ಸಾಮಗ್ರಿಗಳು ಒಂದೇ ಲಗೇಜ್ ನಲ್ಲಿ ಪತ್ತೆ!

ನ್ಯೂಸ್ ಕನ್ನಡ ವರದಿ-(16.04.18): ಮಹಿಳೆಯರ ಸಬಲೀಕರಣಕ್ಕೆಂದು ನೌಹೀರಾ ಶೇಖ್ ನೇತೃತ್ವದ ಮಹಿಳಾ ಎಂಪವರ್ ಮೆಂಟ್ ಪಾರ್ಟಿಯು ವಿಧಾನ ಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ. ಈ ಪಕ್ಷಕ್ಕೂ ಬಿಜೆಪಿ ಪಕ್ಷಕ್ಕೂ ನಂಟಿದೆಯೇ ಎಂದು ಸಾರ್ವಜನಿಕರು ಈ ಮೊದಲೇ ಪ್ರಶ್ನಿಸತೊಡಗಿದ್ದರು. ಆದರೆ ಬಿಜೆಪಿಯೊಂದಿಗೆ ಯಾವುದೇ ನಂಟಿಲ್ಲ ಎಂದು ನೌಹೀರಾ ಸ್ಪಷ್ಟಪಡಿಸಿದ್ದರು. ಇದೀಗ ಸಾರ್ವಜನಿಕರ ಸಂಶಯವು ನೈಜ ಸ್ವರೂಪ ಪಡೆಯುತ್ತಿದ್ದು, ಬಿಜೆಪಿ ಮತ್ತು ಎಂಇಪಿ ಪಕ್ಷಗಳ ಪ್ರಚಾರ ಸಾಮಗ್ರಿಗಳು ಒಂದೇ ಲಗೇಜ್ ನಲ್ಲಿ ಪತ್ತೆಯಾಗಿದೆ.

ನಿಪ್ಪಾಣಿಯ ಸುಲಗಾ ಎಂಬ ಪ್ರದೇಶದಲ್ಲಿ ಚೆಕ್ ಪೋಸ್ಟ್ ಇದ್ದು, ಸಾಮಾನ್ಯವಾಗಿ ತಪಾಸಣೆ ನಡೆಸಲೆಂದು ಬಸ್ ನಿಲ್ಲಿಸಲಾಗುತ್ತದೆ. ಈ ವೇಳೆ ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ಎಂಇಪಿ ಪಕ್ಷದ ಚಿಹ್ನೆ ಇರುವ 40,000ಕ್ಕೂ ಅಧಿಕ ಟೋಪಿಗಳು, 3500ಕ್ಕೂ ಅಧಿಕ ಶಾಲುಗಳು ಹಾಗೂ ಬಿಜೆಪಿ ಪಕ್ಷದ ಪ್ರಚಾರ ಸಾಮಗ್ರಿಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಮುಂಬೈಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಈ ಬಸ್ ನ ಚಾಲಕನ ವಿರುದ್ದ ಇದೀಗ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *