ಕಾಂಗ್ರೆಸಿಗೂ ತಟ್ಟಿದ ಬಂಡಾಯದ ಬಿಸಿ: ಶುರುವಾಗಿದೆ ರಸ್ತೆ ತಡೆ,ಪ್ರತಿಭಟನೆಗಳು!

ನ್ಯೂಸ್ ಕನ್ನಡ ವರದಿ(16-04-2018): ಬಿಜೆಪಿ ಪಟ್ಟಿ ಘೋಷಣೆಯಾದ ಬೆನ್ನಲ್ಲೇ ಪಕ್ಷದೊಳಗೆ ಭಿನ್ನಮತ ಸ್ಪೋಟಗೊಂಡಂತೆಯೇ ಅಭ್ಯರ್ಥಿ ಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷಕ್ಕೂ ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ವಂಚಿತರ ಬೆಂಬಲಿಗರಿಂದ ಪ್ರತಿಭಟನೆ, ಹೆದ್ದಾರಿ ಬಂದ್ ಹಾಗೂ ಬಂಡಾಯದ ಧ್ವನಿ ಕೇಳಿಬರತೊಡಗಿದೆ.

ಚಿಕ್ಕಮಗಳೂರು ಹಾಗೂ ತರಿಕೆರೆಯಲ್ಲಿ ಶಾಸಕ ಶ್ರೀನಿವಾಸ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಟಿಕೆಟ್ ವಂಚಿತ ಶ್ರೀನಿವಾಸ್ ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.

ಹಾನಗಲ್ ನಲ್ಲಿ ಮನೋಹರ್ ತಹಶಿಲ್ದಾರ್ ಹಾಗೂ ತಿಪಟೂರಿನಲ್ಲಿ ಶಾಸಕ ಷಡಕ್ಷರಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಬಂದ್ ಪ್ರತಿಭಟನೆಗಳು ನಡೆಯುತ್ತಿದೆ.

ನೆಲಮಂಗಲದಲ್ಲಿ ಅನಂತಮೂರ್ತಿಗೆ ಟಿಕೆಟ್ ನೀಡದ ಹಿನ್ನಲೆಯಲ್ಲಿ ಬೆಂಬಲಿಗರ್ ಹೆದ್ದಾರಿ ಬಂದ್ ನಡೆಸುತ್ತಿದ್ದಾರೆ. ರಸ್ತೆಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಯುತ್ತಿದೆ. ಸಿಎಂ ಸಿದ್ಧರಾಮಯ್ಯ ಸ್ಪರ್ಧಿಸದೆ ಮೂರನೇ ವ್ಯಕ್ತಿಗೆ ಬಾದಾಮಿ ಕ್ಷೇತ್ರದ ಟಿಕೆಟ್ ನೀಡಿದ ಹಿನ್ನಲೆಯಲ್ಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *