ವಿಧಾನಸಭಾ ಚುನಾವಣೆ: ಕಾಂಗ್ರೆಸ್ ನಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಅಲ್ಪಸಂಖ್ಯಾತ ಅಭ್ಯರ್ಥಿಗಳ ಪಟ್ಟಿ
ನ್ಯೂಸ್ ಕನ್ನಡ ವರದಿ-(16.04.18): ಕರ್ನಾಟಕದಲ್ಲಿ ಮೇ 12ರಂದು ವಿಧಾನಸಭಾ ಚುನಾವಣೆಯು ನಡೆಯಲಿದೆ. ಬಿಜೆಪಿ ಪಕ್ಷವು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂದು ಎರಡನೇ ಹಂತದ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷವು 218 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ನಿನ್ನೆ ತಾನೇ ಘೋಷಿಸಿದೆ. ಇದೀಗ ಈ ಪಟ್ಟಿಯಲ್ಲಿ ಒಟ್ಟು 18 ಮಂದಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದು, ಅವರ ಪಟ್ಟಿ ಇಂತಿದೆ.
- ಬೆಳಗಾವಿ ಉತ್ತರ- ಫೇರೋಜ್ ಸೇಠ್
- ವಿಜಯಪುರ- ಅಬ್ದುಲ್ ಹಮೀದ್ ಮುಶ್ರಿಫ್
- ಗುಲ್ಬರ್ಗಾ ಉತ್ತರ- ಫಾತಿಮಾ ( ದಿ. ಕಮರುಲ್ ಇಸ್ಲಾಂ ದರ್ಮಪತ್ನಿ)
- ಬೀದರ್- ರಹೀಂ ಖಾನ್
- ಗಂಗಾವತಿ – ಇಕ್ಬಾಲ್ ಅನ್ಸಾರಿ
- ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಮುಹಮ್ಮದ್ ಇಸ್ಮಾಯಿಲ್ ಟಮಟಾಗರ್
- ಶಿಗ್ಗಾಂವ್- ಸೈಯದ್ ಅಜೀಂಪೀರ್ ಖಾದ್ರಿ
- ತುಮಕೂರು ನಗರ- ಸೈಯದ್ ರಫೀಕ್ ಅಹಮದ್
- ಕೋಲಾರ- ಸೈಯದ್ ಜಮೀರ್ ಪಾಶಾ
- ಶಿವಾಜಿನಗರ- ರೋಶನ್ ಬೇಗ್
- ಚಾಮರಾಜಪೇಟೆ- ಜಮೀರ್ ಅಹಮದ್ ಖಾನ್
- ಸರ್ವಜ್ಞನಗರ- ಕೆ.ಜೆ. ಜಾರ್ಜ್
- ರಾಮನಗರ- ಎಚ್ ಎ ಇಕ್ಬಾಲ್ ಹುಸೇನ್
- ಮಂಗಳೂರು ಉತ್ತರ- ಮೊಯ್ದೀನ್ ಬಾವಾ
- ಮಂಗಳೂರು ದಕ್ಷಿಣ- ಜೆ.ಆರ್. ಲೋಬೋ
- ಮೂಡಬಿದರೆ- ಅಭಯಚಂದ್ರ ಜೈನ್
- ಮಂಗಳೂರು – ಯು.ಟಿ ಖಾದರ್
- ನರಸಿಂಹರಾಜ- ತನ್ವೀರ್ ಸೇಠ್