ಮಕ್ಕಾ ಮಸೀದಿ ಸ್ಫೋಟ ಪ್ರಕರಣ: ಅಸೀಮಾನಂದ ಸಹಿತ ಎಲ್ಲಾ ಆರೋಪಿಗಳನ್ನು ಬಿಡುಗಡೆ!

ನ್ಯೂಸ್ ಕನ್ನಡ ವರದಿ-(16.04.18): ಸಂಘಪರಿವಾರದ ಅಧೀನ ಸಂಘಟನೆಗಳು ಹಲವು ಬಾಂಬ್ ಸ್ಫೋಟ ಮತ್ತು ಇನ್ನಿತರ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈಗಾಗಲೇ ಹಲವರನ್ನು ಬಿಡುಗಡೆಗೊಳಿಸಲಾಗಿದೆ. ಇದೀಗ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಿ ವಿಶೇಷ ತನಿಖಾದಳದ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿದೆ. ಈ ಪ್ರಕರಣದ ಕುರಿತಾದಂತೆ ಸಾಕ್ಷ್ಯಗಳು ಸಮಧಾನಕರ ಮತ್ತು ಪೂರಕವಾಗಿಲ್ಲ ಎಂದು ಎನ್.ಐ.ಎ ವಿಶೇಷ ನ್ಯಾಯಾಲಯ ತಿಳಿಸಿದೆ. ಪ್ರಕರಣದ ಮುಖ್ಯ ಆರೋಪಿ ಅಸೀಮಾನಂದನನ್ನು ಕೂಡಾ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

2007ರ ಮೇ18ರಂದು ಹೈದರಾಬಾದ್ ನ ಚಾರ್ ಮಿನಾರ್ ಸಮೀಪದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಈ ಸ್ಫೋಟದಲ್ಲಿ 9 ಮಂದಿ ಮೃತಪಟ್ಟಿದ್ದು, 58 ಮಂದಿ ಗಂಭೀರ ಗಾಯಗೊಂಡಿದ್ದರು. ಬಳಿಕ ನಡೆದ ಗಲಭೆಯಲ್ಲಿ ಪೊಲೀಸರಿಂದ 5 ಮಂದಿ ಕೊಲ್ಲಲ್ಪಟ್ಟಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಈ ವೇಳೆ ಈ ಕೃತ್ಯದಲ್ಲಿ ಆರೆಸ್ಸೆಸ್ ನ ಸಹ ಸಂಘಟನೆ ಅಭಿನವ ಭಾರತ ಸಂಘಟನೆಯ ಕೈವಾಡವಿರುದು ಬೆಳಕಿಗೆ ಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಸೀಮಾನಂದ ಮತ್ತು ಆರೆಸ್ಸೆಸ್ ಸಂಘಟನೆಗೆ ಸೇರಿದ 10 ಮಂದಿಯನ್ನು ಬಂಧಿಸಲಾಗಿತ್ತು. 226 ಮಂದಿ ಈ ಪ್ರಕರಣದ ಕುರಿತು ಸಾಕ್ಷ್ಯ ಹೇಳಿದ್ದರು. ಅಸೀಮಾನಂದ ಎಂಬ ಪ್ರಮುಖ ಆರೋಪಿಯು ಈ ಪ್ರಕರಣ ಮಾತ್ರವಲ್ಲದೇ, ಸಂಜೋತಾ ಎಕ್ಸ್ ಪ್ರೆಸ್ ಪ್ರಕರಣ, ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣ, ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಇದೀಗ ಆತನೂ ಸೇರಿದಂತೆ 10 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *