ನಿಮ್ಮ ಕೋಮುವಾದಿ ಮನಸ್ಥಿತಿಯನ್ನು ಬಿಟ್ಟು ಬಿಡಿ: ಸಂಸದ ಪ್ರತಾಪ್ ಸಿಂಹಗೆ ನೀತಿ ಪಾಠ ಮಾಡಿದ ಟಬು ಗುಂಡುರಾವ್!
ನ್ಯೂಸ್ ಕನ್ನಡ ವರದಿ(16/04-2018): ತನ್ನ ಪತಿ ದಿನೇಶ್ ಗುಂಡುರಾವ್ ಅವರನ್ನು ಟೀಕಿಸುವ ಭರದಲ್ಲಿ ಸಂಸದ ಪ್ರತಾಪ್ ಸಿಂಹ ತನ್ನನ್ನು ಮಾತಿನ ನಡುವೆ ತಂದಿರುವುದಕ್ಕೆ ಸಚಿವ ದಿನೇಶ್ ಗುಂಡುರಾವ್ ಪತ್ನಿ ಟಬು ರಾವ್ ಸಂಸದರಿಗೆ ನೀತಿ ಪಾಠ ಮಾಡಿದ್ದಾರೆ.
ತನ್ನ ಫೇಸ್ ಬುಕ್ ಪೇಜಿನಲ್ಲಿ ಈ ಕುರಿತು ಬರೆದ ಟಬು ರಾವ್” ಮಾನ್ಯ ಮೈಸೂರು ಸಂಸದರೇ, ನಾವು ಕಳೆದ ಎರಡು ದಶಕಗಳಿಂದ ಜಾತಿ ಧರ್ಮಗಳನ್ನು ಬದಿಗಿಟ್ಟು ಅನ್ಯೋನಯವಾಗಿ ಜೀವಿಸುತ್ತಿದ್ದೇವೆ. ತಾವು ನನ್ನ ಪತಿಯನ್ನು ಟೀಕಿಸುವ ಭರದಲ್ಲಿ ಮಾತಿನ ನಡುವೆ ನನ್ನನ್ನು ಟೀಕಿಸಿರುವಿರಿ. ನಿಮ್ಮ ರಾಜಕೀಯದಲ್ಲಿ ಮಹಿಳೆಯರನ್ನು ಎಳೆದು ತರುವುದು ಸರಿಯಲ್ಲ. ನನ್ನನ್ನು ಬೇಗಂ ಟಬು ಎಂದು ಉಲ್ಲೇಖಿಸಿದ್ದೀರಿ. ಇದು ಕೇವಲ ನಿಮ್ಮ ಕೋಮುವಾದದ ಮನಸ್ಥಿತಿ ತೋರಿಸುತ್ತದೆ. ನಾನು ಮುಸ್ಲಿಂ ಅವರ ಬ್ರಾಹ್ಮಣ ಎಂಬುದರಲ್ಲಿ ಯಾವುದೇ ರಹಸ್ಯವಿಲ್ಲ. ಭಾರತದ ವಿವಿಧತೆಯಲ್ಲಿ ಏಕತೆ ಎಂಬಂತೆ ನಾವು ಎರಡು ದಶಕಗಳ ಕಾಲ ಉತ್ತಮ ದಾಂಪತ್ಯ ಜೀವನ ನಡೆಸಿದ್ದೇವೆ” ಎಂದು ಬರೆದಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿದ್ದ ದಿನೇಶ್ ಗುಂಡುರಾವ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಪ್ರತಾಪ್ ಸಿಂಹ ಒಂದು ವೇಳೆ ನೀವು ಈ ಹೇಳಿಕೆಯನ್ನು ಮೌಲ್ವಿಗೆ ಹೇಳುತ್ತಿದ್ದರೆ ನಿಮ್ಮ ಪತ್ನಿ ನಿಮಗೆ ಚಪ್ಪಲಿಯಲ್ಲಿ ಹೊಡೆಯುತ್ತಿದ್ದರು ಎಂದಿದ್ದರು.