ಗೋವುಗಳ ವೈಭವೀಕರಣ ನಿಲ್ಲಿಸಿ; ಇದು ಬಹಳ ಅತಿಯಾಯಿತು: ನಿಜ ಗುಣಾನಂದ ಸ್ವಾಮೀಜಿ

ನ್ಯೂಸ್ ಕನ್ನಡ ವರದಿ(16-04-2018): ಗೋವುಗಳಂತೆಯೇ ನಮ್ಮ ದೇಶದಲ್ಲಿ ಬಹಳಷ್ಟು ಪ್ರಾಣಿಗಳಿವೆ. ಆದರೆ ಕೇವಲ ಗೋವುಗಳನ್ನೇ ವೈಭವೀಕರಣಗೊಳಿಸುವ ಮೂಲಕ ನಮ್ಮ ದೇಶವು ಹಿಂದಕ್ಕೆ ಸಾಗುತ್ತಿದೆ. ಇದು ಬಹಳವಾಯಿತು. ಗೋವುಗಳ ವೈಭವೀಕರಣವನ್ನು ನಿಲ್ಲಿಸಿ ಎಂದು ನಿಜ ಗುಣಾನಂದ ಸ್ವಾಮೀಜಿ ಹೇಳಿದ್ದಾರೆ.

ವೀರಭದ್ರಪ್ಪ ಅವರ ‘ಕತ್ತೆಗೊಂದು ಕಾಲ’ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಗೋಮೂತ್ರದಿಂದ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬ ಹುಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಶೇ 1.5ರಷ್ಟು ಜನಸಂಖ್ಯೆಯವರು, ಶೇ 98.5ರಷ್ಟಿರುವವರ ಮೇಲೆ ಮೌಢ್ಯಗಳನ್ನು ಹೇರುತ್ತಿದ್ದಾರೆ. ಅವುಗಳನ್ನು ನಾವು ಧಿಕ್ಕರಿಸಬೇಕು ಎಂದರು.

ಪ್ರಾಣಿಗಳಲ್ಲಿ ಇಲ್ಲದ ಭಿನ್ನತೆಯನ್ನು ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಸೃಷ್ಟಿಸಲಾಗುತ್ತಿದೆ. ಮಠದೊಳಗೆ ರಾಜಕೀಯವನ್ನು ನಿಲ್ಲಿಸಿ ‘ಮಠಕ್ಕೆ ರಾಜಕಾರಣಿಗಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡ್ ಹಾಕಬೇಕಾಗಿದೆ ಎಂದರು.

Leave a Reply

Your email address will not be published. Required fields are marked *