ಉತ್ತರಪ್ರದೇಶದಲ್ಲಿ ನೈಟ್ ಕ್ಲಬ್ ಉದ್ಘಾಟಿಸಿ ವಿವಾದಕ್ಕೀಡಾದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್!

ನ್ಯೂಸ್ ಕನ್ನಡ ವರದಿ-(16.04.18): ಉತ್ತರಪ್ರದೇಶದಲ್ಲಿ ಒಂದರ ಹಿಂದೆ ಒಂದರಂತೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದೆ. ಮೊನ್ನೆ ತಾನೇ ಹದಿನಾರು ವರ್ಷ ವಯಸ್ಸಿನ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕನನ್ನು ಬಂಧಿಸಲಾಗಿತ್ತು. ಈ ಪ್ರಕರಣವು ಎಲ್ಲೆಡೆ ಸದ್ದು ಮಾಡುತ್ತಿದೆ. ಇದರ ಬಳಿಕ ಇನ್ನೋರ್ವ ಯುವತಿಯು ಪೊಲೀಸರು ಅತ್ಯಾಚಾರ ಪ್ರಕರಣ ಸ್ವೀಕರಿಸುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ನಿನ್ನೆ ತಾನೇ ಇನ್ನೂ ಮೂವರು ಯುವತಿಯರು ಅತ್ಯಾಚಾರಕ್ಕೆ ಒಳಗಾಗಿದ್ದರು. ಇವೆಲ್ಲದರ ನಡುವೆಯೂ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಉತ್ತರಪ್ರದೇಶದ ಲಕ್ನೋ ಸಮೀಪ ನೈಟ್ ಕ್ಲಬ್ ಅನ್ನು ಉದ್ಘಾಟನೆ ಮಾಡಿದ್ದಾರೆ.

ಉನ್ನಾವೋ ಅತ್ಯಾಚಾರ ಪ್ರಕರಣದ ಕುರಿತಾದಂತೆ ಅಂತಾರಾಷ್ಟ್ರೀಯ ಮಟ್ಟದಿಂದಲೂ ಪ್ರತಿಭಟನೆಗಳು ವ್ಯಕ್ತವಾಗುತ್ತಿದೆ. ಆದರೆ ಸ್ವತಃ ಉನ್ನಾವೋ ಕ್ಷೇತ್ರವನ್ನು ಪ್ರತಿನಿಧಿಸಿ ಸಂಸದರಾಗಿರುವ ಸಾಕ್ಷಿ ಮಹಾರಾಜ್ ಇದ್ಯಾವುದರ ಗೊಡವೆಯೂ ಇಲ್ಲದೆ ನೈಟ್ ಕ್ಲಬ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಒಂದೆಡೆ ಬಿಜೆಪಿ ಮತ್ತು ಸಂಗಪರಿವಾರವು ನೈಟ್ ಕ್ಲಬ್ ಗಳು ಪಬ್ ಗಳು ಪಾಶ್ಚಾತ್ಯ ಅನುಕರಣೆಯೆಂದು ದಾಳಿ ಮಾಡುತ್ತಿದ್ದು, ಇನ್ನೊಂದೆಡೆ ಬಿಜೆಪಿ ಸಂಸದರು ಅಶ್ಲೀಲತೆಗೆ ಪ್ರಚೋದನೆ ನೀಡುವ ನೈಟ್ ಕ್ಲಬ್ ಉದ್ಘಾಟಿಸುತ್ತಿದ್ದಾರೆ. ಮತ್ತೊಂದೆಡೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *