ಗೌರಿ ಹಂತಕ ನವೀನ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗಾಗಿ ಗುಜರಾತ್ ಗೆ ಕರೆದೊಯ್ದ ಎಸ್ಐಟಿ!
ನ್ಯೂಸ್ ಕನ್ನಡ ವರದಿ(16-04-2018): ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಎಸ್ಐಟಿ ಅಧಿಕಾರಿಗಳು ಮಂಪರು ಪರೀಕ್ಷೆಗಾಗಿ ಗುಜರಾತಿನ ಫೋರೆನ್ಸಿಕ್ ಸೈನ್ಸ್ ಲೆಬರೋಟರಿ(ಎಫ್ಎಸ್ಎಲ್)ಗೆ ಕರದೊಯಿದಿದ್ದಾರೆ.
ತನ್ನ ಹೇಳಿಕೆಯನ್ನು ಪದೇ ಪದೇ ತಪ್ಪಿಸುವ ಮೂಲಕ ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದ ಆರೋಪಿ ನವೀನ್ ನನ್ನು ಮಂಪರು ಪರೀಕ್ಷೆ ನಡೆಸಲು ಅವಕಾಶ ನೀಡಬೇಕೆಂದು ಎಸ್ಐಟಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದರು. ನವೀನ್ ಮಂಪರು ಪರೀಕ್ಷೆಗೆ ಸಮ್ಮತಿಸುವುದರೊಮದಿಗೆ ನ್ಯಾಯಾಲಯವು ಎಸ್ಐಟಿಗೆ ಆರೋಪಿಯ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.
ಶವಿವಾರದಂದು ಆರೋಪಿಯನ್ನು ಮಂಪರು ಪರೀಕ್ಷೆಗೆ ಗುಜರಾತ್ ಎಫ್ಎಸ್ಎಲ್ ಗೆ ಕರೆದುಕೊಂಡು ಹೋಗಲಾಗಿದ್ದು, ಮಂಪರು ಪರೀಕ್ಷೆಯ ಪ್ರತೀ ಬೆಳವಣಿಗೆಯನ್ನು ನ್ಯಾಯಾಧೀಶರ ಗಮನಕ್ಕೆ ತರಲಾಗುವುದೆಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.