ಸಂಘ ಪರಿವಾರವನ್ನು ಪ್ರಶ್ನಿಸಿದ ಕೂಡಲೇ ಉಚ್ಚಾಟನೆಯೇ?: ಪ್ರಮೋದ್ ಮುತಾಲಿಕ್
ನ್ಯೂಸ್ ಕನ್ನಡ ವರದಿ(16-04-2018): ದೇಶದಲ್ಲಿ ಆರ್ಎಸ್ಎಸ್ ನವರನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲವೇ?. ಅವರನ್ನು ಪ್ರಶ್ನಿಸಿದ ಕೂಡಲೇ ಉಚ್ಚಾಟನೆ ಶಿಕ್ಷೆಯೇ ಎಂದು ಸಂಘ ಪರಿವಾರವನ್ನು ಪ್ರಶ್ನಿಸುವ ಮೂಲಕ ಪ್ರಮೋದ್ ಮುತಾಲಿಕ್ ತೊಗಾಡಿಯಾರನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರವೀಣ್ ತೊಗಾಡಿಯಾ ಅವರನ್ನು ವಿಹೆಚ್ ಪಿ ಯಿಂದ ಉಚ್ಚಾಟಿಸಿರುವುದು ಅತ್ಯಂತ ಹೇಯ ನೀಚ ಕೃತ್ಯ. ಇದನ್ನು ಯಾರಿಂದಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುತಾಲಿಕ್ ಆಕ್ರೋಶಭರಿತರಾಗಿ ಹೇಳಿದ್ದಾರೆ.
ಹಿಂದೂ ಮತಗಳನ್ನು ಪಡೆಯಲು ತೊಗಾಡಿಯಾ ಬೇಕು. ಅಧಿಕಾರಕ್ಕೆ ಬಂದ ನಂತರ ಅವರು ಬೇಡ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಮುತಾಲಿಕ್, ರಾಮ ಮಂದಿರ ಕಟ್ಟುವಂತೆ ಒತ್ತಾಯಿಸುವುದು, ಗೋಹತ್ಯೆ ನಿಷೇಧ ಮಾಡುವಂತೆ ಒತ್ತಾಯಿಸುವುದು ಅಪರಾಧವೇ? ಎಂದು ಪ್ರಶ್ನಿಸಿದ್ದಾರೆ.