ಪ್ರಯಾಣಿಕರಿಗೆ ಯುಎಇ ವಿಮಾನ ನಿಲ್ದಾಣಗಳಲ್ಲೇ ಒಂದು ದಿನದ ವೀಸಾ ಸೌಲಭ್ಯ: ಯುಎಇ ಕ್ಯಾಬಿನೆಟ್ ಅಸ್ತು

ನ್ಯೂಸ್ ಕನ್ನಡ ವರದಿ(16-04-2018): ಯುಎಇ ವಿಮಾನ ನಿಲ್ದಾಣಗಳಿಂದ ಹಾದು ಹೋಗುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲೇ ಒಂದು ದಿನದ ವೀಸಾ ನೀಡುವ ಯೋಜನೆಗೆ ಯುಎಇ ಸಚಿವ ಸಂಪುಟ ಒಪ್ಪಿಗೆಯನ್ನು ಸೂಚಿಸಿದೆ. ಯುಎಇಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಅಂಗವಾಗಿ ಈ ನೂತನ ಕಾನೂನಿನಿಗೆ ಅಂಗೀಕಾರ ನೀಡಲಾಗಿದೆ.

ಯಾವುದೇ ದೇಶಗಳಿಗೆ ಯುಎಇ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ಈ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಮೂಲಕ ಒಂದು ದಿನದ ಅವಧಿಯಲ್ಲಿ ಪ್ರಯಾಣಿಕರಿಗೆ ಯುಎಇಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ದೊರೆಯಲಿದೆ.

ಈ ನೂತನ ಕಾನೂನಿಗೆ ಸಚಿವ ಸಂಪುಟ ಅಸ್ತು ನೀಡಿದ್ದು, ಶೀಘ್ರವೇ ಈ ಕಾನೂನು ಜಾರಿಗೆ ಬರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *