ಅಂಬರೀಷ್ ಗೆ ಮಂಡ್ಯದ ಟಿಕೆಟ್: ಭುಗಿಲೆದ್ದ ಭಿನ್ನಮತ; ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿ ಧ್ವಂಸ
ನ್ಯೂಸ್ ಕನ್ನಡ ವರದಿ(16-04-2018):ಈ ಬಾರಿಯ ಚುನಾವಣೆಯಲ್ಲಿ ಸಚಿವ ಅಂಬರೀಷ್ ಗೆ ಮಂಡ್ಯದ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಮಂಡ್ಯದ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿ ಕುಮಾರ್ ಗಣಿಗ ಬೆಂಬಲಿಗರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಧ್ವಂಸ ಗೊಳಿಸಿದ್ದಾರೆ.
ರವಿ ಗಾಣಿಗರವರು ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಅಂಬರೀಷ್ ಟಿಕೆಚ್ ಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂಬರೀಷ್ ಗೆ ಟಿಕೆಟ್ ನೀಡಿದ ಹಿನ್ನಲೆಯಲ್ಲಿ ಈಗ ಭಿನ್ನಮತ ಭುಗಿಲೆದ್ದಿದೆ.
ಅಂಬರೀಷ್ ನನಗೆ ಮೋಸ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಅನಾರೋಗ್ಯದಿಂದಾಗಿ ನಾನೇ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿದ್ದೇನೆ. ಆದರೂ ನನಗೆ ಟಿಕೆಟ್ ನೀಡಿಲ್ಲ. ನಾನು ಮಂಡ್ಯದಿಂದ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ ಎಂದು ಗಣಿಗ ಹೇಳಿ5ದ್ದಾರೆ.