ಒರಿಸ್ಸಾದಲ್ಲಿ 4ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ: ಪರಿಸ್ಥಿತಿ ಗಂಭೀರ!
ನ್ಯೂಸ್ ಕನ್ನಡ ವರದಿ-(16.04.18): ದೇಶದಲ್ಲಿ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಹಿಂಸೆಗೆ ಕೊನೆಯೇ ಇಲ್ಲವೇನೋ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 24 ವರ್ಷ ಪ್ರಾಯದ ತರುಣನೋರ್ವ ತನ್ನ ನೆರೆಮನೆಯ ನಾಲ್ಕು ವರ್ಷ ಪ್ರಾಯದ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ತನ್ನ ಮನೆಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಬಾಲಕಿಯು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ನೆರೆಮನೆಯ ತರುಣನು ಆಕೆಗೆ ಚಾಕಲೇಟ್ ಆಸೆ ತೋರಿಸಿ ಕರೆದೊಯ್ದು ಆಕೆಯ ಮೇಲೆ ರೇಪ್ ಎಸಗಿದ್ದಾನೆ. ನೋವಿನಿಂದ ನರಳುತ್ತಿದ್ದ ಬಾಲಕಿಯು ನಡೆದ ಘಟನೆಯನ್ನು ತನ್ನ ತಾಯಿಗೆ ತಿಳಿಸಿದಾಗಲೇ ವಿಷಯ ಗೊತ್ತಾಗಿತ್ತು. ಹೆತ್ತವರು ಬಾಲಕಿಯನ್ನು ಕೂಡಲೇ ನೀಲಗಿರಿ ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸ ಕೊಡಿಸಿದರಾದರೂ ಬಾಲಕಿ ಸ್ಥಿತಿ ಹದಗೆಡುತ್ತಲೇ ಇದೆ ಎಂದು ವರದಿಯಾಗಿದೆ.