6 ತಿಂಗಳ ಪುಟ್ಟ ಮಗುವನ್ನು ಕಟ್ಟಡದ ಕೆಳಗೆ ಎಸೆದ ನಿರ್ದಯಿ ತಂದೆ!
ನ್ಯೂಸ್ ಕನ್ನಡ ವರದಿ-(16.04.18): ಪುಟ್ಟ ಮಕ್ಕಳಿಗೆ ಇರುವೆ ಕಚ್ಚಿದರೂ ತಂದೆ ತಾಯಿಯ ಎದೆಯಲ್ಲಿ ನೋವಿನ ಅನುಭವವಾಗುತ್ತದೆ. ಇಂತಹದರಲ್ಲಿ ಇದೀಗ ತಂದೆಯೋರ್ವ ತನ್ನ ಆರು ತಿಂಗಳ ಪುಟ್ಟ ಮಗುವನ್ನು ಕಟ್ಟಡದ ಕೆಳಗೆಸೆದ ಘಟನೆಯು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನ ಪೋರ್ಟ್ ಎಲಿಜಬೆತ್ ನಗರದಲ್ಲಿ ನಡೆದಿದೆ. ಸಮೀಪದ ಕ್ವಾದ್ವೆಸಿ ಪಟ್ಟಣದಲ್ಲಿ ಆಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದು, ಈ ವೇಳೆ ಈತ ಈರೀತಿ ಪ್ರತಿಭಟನೆ ನಡೆಸಿದ್ದಾನೆಂದು ತಿಳಿದು ಬಂದಿದೆ.
ಆಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಟ್ಟಡದ ಮೇಲೆ ಹತ್ತಿದ ವ್ಯಕ್ತಿಯೋರ್ವ ತನ್ನ ಕೈಯಲ್ಲಿದ್ದ ಪುಟ್ಟ ಮಗುವನ್ನು ಎಸೆಯಲು ಪ್ರಯತ್ನಿಸುತ್ತಿದ್ದ. ಪ್ರತಿಭಟನನಿರತರು ಮಗುವನ್ನು ಎಸೆಯಲು ಪ್ರಚೋದನೆ ನೀಡುತ್ತಿದ್ದರು. ಸುತ್ತಲೂ ಪೊಲೀಸರು ಕೂಡಾ ನಿಂತಿದ್ದರು. ಕೊನೆಗೂ ಎಲ್ಲರೂ ನೋಡುತ್ತಿರುವಂತೆಯೇ ವ್ಯಕ್ತಿಯು ಮಗುವನ್ನು ಎಸೆದಿದ್ದು, ಕೆಳಗಿದ್ದ ಪೊಲೀಸರು ಕ್ಯಾಚ್ ಹಿಡಿದು ಕೊಂಡಿದ್ದಾರೆ. ಇದೀಗ ಮಗು ಸುರಕ್ಷಿತವಾಗಿದ್ದು, ತಂದೆಯನ್ನು ಕೊಲೆಯತ್ನ ಕೇಸು ದಾಖಲಿಸಿ ಜೈಲಿಗಟ್ಟಿದ್ದಾರೆಂದು ತಿಳಿದು ಬಂದಿದೆ.
https://www.youtube.com/watch?v=9Z5r4_bmnt8