ಆಸಿಫಾ ಪರ ವಕೀಲೆ ದೀಪಿಕಾ ರಾಜವತ್ ಗೆ ರಕ್ಷಣೆ ನೀಡಿ: ಜಮ್ಮು-ಕಾಶ್ಮೀರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
ನ್ಯೂಸ್ ಕನ್ನಡ ವರದಿ(16-04-2018): ಬೆದರಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಆಸಿಫಾ ಪರ ವಕೀಲೆ ದೀಪಿಕಾ ರಾಜವತ್ ಅವರಿಗೆ ಭದ್ರತೆಯನ್ವು ಒದಗಿಸಿ ರಕ್ಷಣೆ ನೀಡಬೇಕು ಅದರಂತೆ ಆಸಿಫಾ ಕುಟುಂಬಕ್ಕೂ ಕೂಡ ರಕ್ಷಣೆ ನೀಡುವಂತೆ ಕಾಶ್ಮೀರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇಂದು ಸುಪ್ರೀಂ ಕೋರ್ಟಿನಲ್ಲಿ ನನಗೆ ನಿನ್ನನ್ನು ಅತ್ಯಾಚಾರಗೈದು ಕೊಲೆ ಮಾಡುತ್ತೇವೆಂಬ ಬೆದರಿಕೆ ಕರೆಗಳು ಬರುತ್ತಿದ್ದು, ನಾನು ಯಾವಾಗ ಬೇಕಾದರೂ ಕೊಲೆಯಾಗುವ ಸಾಧ್ಯತೆಯಿದೆ ಎಂದು ಆಸಿಫಾ ಪರ ವಕೀಲೆ ದೀಪಿಕಾ ರಾಜವತ್ ಸುಪ್ರೀಂ ಕೋರ್ಟಿನಲ್ಲಿ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದೆ.