ತಾಜ್ ಮಹಲ್ ಮತ್ತು ಬಾಬರಿ ಮಸ್ಜಿದ್ ಸರಕಾರಕ್ಕೆ ಸೇರಿದ್ದೇ ಹೊರತು ವಕ್ಫ್ ಮಂಡಳಿಗಲ್ಲ: ಮೊಘಲ್ ವಂಶಸ್ಥ!
ನ್ಯೂಸ್ ಕನ್ನಡ ವರದಿ-(16.04.18): ವಿಶ್ವಪ್ರಸಿದ್ಧ ಸ್ಮಾರಕ ತಾಜ್ ಮಹಲ್ ಮತ್ತು ಬಾಬರಿ ಮಸೀದಿಯ ಜಾಗಗಳು ಯಾವುದೇ ಧಾರ್ಮಿಕ ಸಂಸ್ಥೆಯ ಸೊತ್ತಲ್ಲ ಅಥವಾ ಅದು ಸುನ್ನೀ ವಕ್ಫ್ ಮಂಡಳಿಗೆ ಸೇರಿದ್ದಲ್ಲ. ಇವುಗಳೇನಿದ್ದರೂ ಭಾರತ ಸರಕಾರಕ್ಕೆ ಸೇರಿದ್ದು ಮತ್ತು ರಾಷ್ಟ್ರೀಯ ಸ್ಮಾರಕವಾಗಿದೆ. ಇವುಗಳ ಮೇಲೆ ಯಾರೂ ಹಕ್ಕು ಚಲಾಯಿಸುವಂತಿಲ್ಲ ಎಂದು ಮೊಘಲ್ ವಂಶಸ್ಥ ಮತ್ತು ಕೊನೆಯ ಮೊಘಲ್ ಅರಸ ಬಹದ್ದೂರ್ ಶಾ ಝಫರ್ ರವರ ಮೊಮ್ಮಗ ವೈ.ಎಚ್. ಟ್ಯೂಸಿ ಹೇಳಿದ್ದಾರೆ.
“ಶಾಜಹಾನ್ ಯಾರಿಗೂ ಉಯಿಲು ಬರೆದಿಡಲಿಲ್ಲ. ಸುನ್ನೀ ವಕ್ಫ್ ಮಂಡಳಿಗೆ ತಾಜ್ ಮಹಲ್ ಗುತ್ತಿಗೆ ತೆಗೆದುಕೊಳ್ಳುವ ಹಕ್ಕಿಲ್ಲ. ಸುನ್ನೀ ವಕ್ಫ್ ಮಂಡಳಿಯ ಕಚೇರಿಯಲ್ಲಿ ಸರಿಯಾದ ಕುರ್ಚಿ ಟೇಬಲ್ ಗಳೇ ಇಲ್ಲ. ಇನ್ನು ತಾಜ್ ಮಹಲ್ ಅನ್ನು ಸಂರಕ್ಷಿಸುವುದು ಹೇಗೆ? ಬಾಬರೀ ಮಸೀದಿಯ ಜಾಗದಲ್ಲಿ ರಾಮಮಂದಿರ ನಿರ್ಮಿಸುವುದು ತಪ್ಪೇನಲ್ಲ. ಎರಡು ಧರ್ಮಗಳ ನಡುವಿನ ಕಲಹಗಳು ಅಂತ್ಯವಾದರೆ ಸಾಕು. ನಾನು ಶಾಜಹಾನ್ ಉರೂಸ್ ಗೆ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಕಾರ್ಯಕರ್ತರನ್ನು ಆಹ್ವಾನಿಸಿದ್ದೇನೆ ಎಂದು ಅವರು ಹೇಳಿದರು.