ಮಗುವಿನ ಮೃತದೇಹ ಕೈಯಲ್ಲಿದ್ದರೂ ಸ್ಥಳೀಯರು ದಫನ ಮಾಡಲು ಅವಕಾಶ ನೀಡಲಿಲ್ಲ: ಆಸೀಫಾ ತಂದೆ ಅಳಲು

ನ್ಯೂಸ್ ಕನ್ನಡ ವರದಿ-(13.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು ದಿನಗಳ ಕಾಲ ಅತ್ಯಾಚಾರ ಮಾಡಲಾಗಿತ್ತು. ಬಳಿಕ ಬಾಲಕಿಯನ್ನು ಕೊಂದು ಕಾಡಿನಲ್ಲಿ ಎಸೆದಿದ್ದರು. ಇದೀಗ ಆಸಿಫಾಳ ಮೃತದೇಹವನ್ನು ಗ್ರಾಮದಲ್ಲಿ ದಫನ ಮಾಡುವುದಕ್ಕೆ ಸ್ಥಳಿಯ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಸುಮಾರು 8 ಕಿ,ಮೀ ದೂರದಲ್ಲಿ ದಫನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆಸಿಫಾ ಮೃತದೇಹವು ದೊರಕಿದ ಬಳಿಕ ಅಂತ್ಯಕ್ರಿಯೆಗೆಂದು ಗ್ರಾಮದಲ್ಲಿ ಪೋಷಕರು ಗುಂಡಿ ತೋಡುತ್ತಿದ್ದರು. ಈ ವೇಳೆ ಅಲ್ಲಿಗ ಆಗಮಿಸಿದ ಗ್ರಾಮಸ್ಥರು ಮತ್ತು ಗ್ರಾಮದ ಮುಖ್ಯಸ್ಥರು, ಈ ಜಾಗ ನಿಮಗೆ ಸೇರಿದ್ದಲ್ಲ. ನೀವು ನಮ್ಮ ಜಾಗವನ್ನು ಅತಿಕ್ರಮಿಸಲು ನೋಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಎಷ್ಟೇ ಅಲವತ್ತುಕೊಂಡರೂ ದಫನ ಕ್ರಿಯೆಗೆ ಅವಕಾಶವೇ ನೀಡಲಿಲ್ಲ. ಪುಟ್ಟ ಮಗುವಿನ ಮೃತದೇಹ ಕೈಯಲ್ಲೇ ಇಟ್ಟುಕೊಂಡಿದ್ದೆವು. ದಫನ ಮಾಡಲು ಒಂದಿಷ್ಟು ಜಾಗ ಸಾಕಾಗಿತ್ತು ನಮಗೆ. ಆದರೆ ಅವರು ಅದನ್ನೂ ನೀಡಲಿಲ್ಲ ಎಂದು ಆಸಿಫಾ ಪೋಷಕರು ಕಣ್ಣೀರು ಹಾಕಿದ್ದಾರೆ.

Leave a Reply

Your email address will not be published. Required fields are marked *