ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಬ್ಬ ಪ್ರಾರಂಭ!
ನ್ಯೂಸ್ ಕನ್ನಡ ವರದಿ-(07.04.18): ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐಪಿಎಲ್ ಎಂದರೆ ಸದ್ಯ ಭಾರತದಾದ್ಯಂತ ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಯಲ್ಲೂ ಪ್ರಸಿದ್ಧಿ ಗಳಿಸಿಕೊಂಡಿದೆ. ಈ ವರ್ಷದ ಐಪಿಎಲ್ ಪ್ರಾರಂಭಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯೆಂದೇ ಐಪಿಎಲ್ ಖ್ಯಾತಿ ಗಳಿಸಿದ್ದು, ಒಂದು ಐಪಿಎಲ್ ಪ್ರಾರಂಭವಾಗಿ ಮುಗಿಯುವ ಹೊತ್ತಿನಲ್ಲಿ ಹಣದ ಸುರಿಮಳೆಯೇ ಹರಿದಿರುತ್ತದೆ. ಇದೀಗ ಇಂದಿನಿಂದ ಐಪಿಎಲ್ ಕ್ರಿಕೆಟ್ ಪ್ರಾರಂಭವಾಗಲಿದ್ದು, ಎರಡು ಬಲಿಷ್ಠ ತಂಡಗಳು ಕಾದಾಡುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ಮತ್ತು ನಿಷೇಧಕ್ಕೊಳಗಾದ ಬಳಿಕ ಈ ಆವೃತ್ತಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಕ್ಕೂ ಮೊದಲು ಭರ್ಜರಿ ಉದ್ಘಾಟನಾ ಕಾರ್ಯಕ್ರಮವು ನಡೆಲಿದ್ದು, ಹಲವು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ಎಲ್ಲಾ ತಂಡಗಳು ಸಮಬಲವಾಗಿದ್ದು, ಪಂದ್ಯಾಟವು ಕುತೂಹಲ ಕೆರಳಿಸಲಿದೆ ಎಂದು ಕ್ರಿಕೆಟ್ ತಜ್ಞರು ಅಂದಾಜಿಸಿದ್ದಾರೆ.