ಹೋಟೆಲ್ ಕಾರ್ಮಿಕರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್!

ನ್ಯೂಸ್ ಕನ್ನಡ ವರದಿ-(17.04.18): ಕೆಲವರು ತಾವು ಯಾವುದೇ ಹಂತಕ್ಕೆ ತಲುಪಿದರೂ, ಪ್ರಖ್ಯಾತಿಯ ತುತ್ತತುದಿಗೇರಿದರೂ ಸರಳತೆಯು ಅವರಲ್ಲಿ ಮಾಸುವುದೇ ಇಲ್ಲ. ಇದಕ್ಕೆ ತಾಜಾ ಉದಾಹರಣೆಯಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರನ್ನು ಉದಾಹರಣೆಯಾಗಿ ನೀಡಬಹುದು. ಇದೀಗ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮುಂಬೈನಲ್ಲಿ ಹೋಟೆಲ್ ಕಾರ್ಮಿಕರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ವೀಡಿಯೋವೊಂದು ವೈರಲ್ ಆಗಿದೆ. ಸಚಿನ್ ಸ್ನೇಹಿತ ವಿನೋದ್ ಕಾಂಬ್ಳಿ ಈ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

ಮುಂಬೈನಲ್ಲಿ ಸಚಿನ್ ತೆಂಡೂಲ್ಕರ್ ಕೆಲ ಹೋಟೆಲ್ ಕಾರ್ಮಿಕರೊಂದಿಗೆ ಗಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೀಡಿಯೋವನ್ನು ಸಚಿನ್ ರ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಳಿ ಟ್ವಿಟ್ಟರ್ ನಲ್ಲಿ ನೀನು ಹಳೆಯ ದಿನಗಳನ್ನು ಮತ್ತೆ ಆನಂದಿಸುತ್ತಿರುವುದು ನನಗೆ ಖುಷಿ ತಂದಿದೆ ಎಂದು ಅಪ್ಲೋಡ್ ಮಾಡಿದ್ದರು. ಕೆಲವೇ ಗಂಟೆಗಳಲಲಿ ಲಕ್ಷಗಟ್ಟಲೆ ವೀಕ್ಷಣೆಗಳನ್ನು ಕಂಡ ಈ ವೀಡಿಯೋ ಇದೀಗ ಸಾಮಾಝಿಕ ಜಾಲತಾಣಗಳಾದ್ಯಂತ ವೈರಲ್ ಆಗಿದೆ.

https://www.youtube.com/watch?v=2kWPLq1JM4Y

Leave a Reply

Your email address will not be published. Required fields are marked *