ಪಾಕಿಸ್ತಾನ: ಕಪಾಳಕ್ಕೆ ಹೊಡೆಯುವ ಆಟದಲ್ಲಿ ಮೃತಪಟ್ಟ ವಿದ್ಯಾರ್ಥಿ!
ನ್ಯೂಸ್ ಕನ್ನಡ ವರದಿ(17-04-2018): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶಾಲೆಯೊಂದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಬ್ಬರು ವಿರಾಮದ ಸಮಯದಲ್ಲಿ ಮೋಜಿಗಾಗಿ ಕಪಾಳಕ್ಕೆ ಹೊಡೆಯುವ ಆಟ ಆಡಿದ ಕಾರಣ ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಬಿಲಾಲ್ ಹಾಗೂ ಅಮೀರ್ ಎಂಬ ಸಹಪಾಠಿಗಳಿಬ್ಬರು ಶಾಲೆಯ ವಿರಾಮದ ವೇಳೆಯಲ್ಲಿ ಮೈದಾನದಲ್ಲಿ ಕಪಾಳಕ್ಕೆ ಹೊಡೆಯುವ ಆಟ ಆಡಲು ಶುರು ಮಾಡಿದರು. ಇವರ ಆಟವನ್ನು ನೋಡಲು ಗೆಳೆಯರು ಹಾಗೂ ಶಿಕ್ಷಕರು ಮೈದಾನದಲ್ಲಿ ಇವರ ಕಪಾಳ ಮೋಕ್ಷ ಆಟವನ್ನು ನೋಡಲು ಮೈದಾನದ ಸಮೀಪ ಬಂದರು. ಎಲ್ಲರೂ ನೋಡುತ್ತಿದ್ದಂತೆ ಗೆಳೆಯರಿಬ್ಬರೂ ಪರಸ್ಪರರ ಕಪಾಳಕ್ಕೆ ಹೊಡೆಯಲು ಪ್ರಾರಂಭಿಸುತ್ತಾರೆ.
ಆಟ ಶುರುವಾದಂತೆ ಒಬ್ಬರನ್ನು ಇನ್ನೊಬ್ಬರು ಎಷ್ಟು ಸಾಧ್ಯವೋ ಅಷ್ಟು ಗಟ್ಟಿಯಾಗಿ ಹೊಡೆಯಲು ಆರಂಭಿಸಿದ್ದಾರೆ. ಸ್ವಲ್ಪ ಸಮಯದ ನಂತರ ಅಮಿರ್ ನ ಬಲವಾದ ಏಟು ಬಿಲಾಲ್ನ ಕುತ್ತಿಗೆಗೆ ಬಿದ್ದು ಬಿಲಾಲ್ ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಅರ್ಧ ಗಂಟೆ ತಡವಾಗಿ ಬಂದ ರಕ್ಷಣಾ ತಂಡ ಬಿಲಾಲ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ತಡವಾಗಿ ಆಸ್ಪತ್ರೆಗೆ ಸಾಗಿಸಿದ ಕಾರಣ ಬಿಲಾಲ್ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
https://youtu.be/T9DsbQhfPAM