ಕೇಸರಿ ಭಯೋತ್ಪಾದನೆ ಎಂಬುವುದೇ ಇಲ್ಲ: ಕಾಂಗ್ರೆಸ್ ಮುಖಂಡ ಪಿ.ಎಲ್.ಪುನಿಯಾ!
ನ್ಯೂಸ್ ಕನ್ನಡ ವರದಿ(17-04-2018): ಭಯೋತ್ಪಾದನೆಯನ್ನು ಧರ್ಮದೊಂದಿಗೆ ತಳುಕು ಹಾಕುವುದು ಸರಿಯಲ್ಲ. ನಾವೆಂದೂ ಕೇಸರಿ ಭಯೋತ್ಪಾದನೆ ಎಂಬ ಪದವನ್ನೇ ಉಪಯೋಗಿಸಿಲ್ಲ ಎಂದು ಎಐಸಿಸಿ ವಕ್ತಾರ ಪಿ.ಎಲ್.ಪುನಿಯಾ ಹೇಳಿದ್ದಾರೆ.
ಹಿಂದೂ ಧರ್ಮಕ್ಕೆ ಕಳಂಕ ತರಲು ಕಾಂಗ್ರೆಸ್ ಪಕ್ಷ ಕೇಸರಿ ಭಯೋತ್ಪಾದನೆ ಎಂಬ ಗುಮ್ಮನನ್ನು ಬಳಸಿ ಕೊಳ್ಳುತ್ತಿದೆ ಎಂಬ ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಪಕ್ಷವು ಈ ಸ್ಪಷ್ಟೀಕರಣ ನೀಡಿದೆ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸಿನ ಬೇರಾವುದೇ ನಾಯಕರು ಕೇಸರಿ ಪದ ಪ್ರಯೋಗ ಮಾಡಿದ ದಾಖಲೆಗಳು ನಿಮ್ಮ ಬಳಿಯಿದ್ದರೆ ಬಿಡುಗಡೆ ಮಾಡಿ ಎಂದು ಬಿಜೆಪಿಗೆ ಅವರು ಸವಾಲೆಸೆದರು.
ಸ್ವಾಮಿ ಅಸೀಮಾನಂದರ ಖುಲಾಸೆ ಸೇರಿದಂತೆ ಹಲವು ದೋಷಮುಕ್ತಿಗಳ ಬಗ್ಗೆ ಪ್ರತಿಕ್ರಿಯಿಸುತ್ತ ಕಾಂಗ್ರೆಸ್ ವಕ್ತಾರರು, ‘ಭಯೋತ್ಪಾದನೆ ಜತೆ ಯಾವುದೇ ಧರ್ಮ ಅಥವಾ ಸಮುದಾಯವನ್ನು ತಳುಕು ಹಾಕುವಂತಿಲ್ಲ’ ಎಂದು ನುಡಿದರು.