ಟಿಕೆಟ್ ನೀಡಿ ಎಂದು ಯಡಿಯೂರಪ್ಪ ಕಾಲಿಗೆ ಬಿದ್ದ ಮಾಜಿ ಸಚಿವ ಬೆಳ್ಳುಬ್ಬಿ ಅಭಿಮಾನಿ!

ನ್ಯೂಸ್ ಕನ್ನಡ ವರದಿ-(17.04.18): ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 12ರಂದು ನಡೆಯಲಿದೆ. ಈಗಾಗಲೇ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಅಭ್ಯರ್ಥೀಗಳ ಘೋಷಣೆಯ ಬೆನ್ನಲ್ಲೇ ಭಿನ್ನಮತಗಳು ಭುಗಿಲೆದ್ದಿದ್ದು, ಬಿಜೆಪಿ ಪಕ್ಷದ ವಿರುದ್ಧ ಬಿಜೆಪಿಗರೇ ಪ್ರತಿಭಟನೆ ಮಾಡುತ್ತಿದ್ದಾರೆ. ಈಕಡೆ ಕಾಂಗ್ರೆಸ್ ನವರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಇದೀಗ ಟಿಕೆಟ್ ಕೊಡಿಸಿ ಎಂದು ಟಿಕೆಟ್ ವಂಚಿತ ಮಾಜಿ ಶಾಸಕ ಬೆಳ್ಳುಬ್ಬಿಯ ಅಭಿಮಾನಿಯೋರ್ವರು ಬಿ.ಎಸ್ ಯಡಿಯೂರಪ್ಪರವರ ಕಾಲಿಗೆ ಬಿದ್ದ ಘಟನೆಯು ನಡೆದಿದೆ.

ಬಿಎಸ್ ವೈ ಅವರು ವಾಯುವಿಹಾರಕ್ಕೆ ತೆರಳಿದ್ದ ವೇಳೆ ಬೆಳ್ಳುಬ್ಬಿ ಬಂಟ ಬಂದು ಟಿಕೆಟ್‍ಗಾಗಿ ಯಡಿಯೂರಪ್ಪ ಅವರ ಕಾಲು ಹಿಡಿದು ನಮಸ್ಕರಿಸಿದ್ದಾರೆ. ಈ ವೇಳೆ ಬಿಎಸ್ ವೈ ಅವರು, ನನ್ ಕಾಲಿಗೆ ಬೀಳ್ಬೇಡಪ್ಪ, ಟಿಕೆಟ್ ನಾನು ಕೊಡಲ್ಲ, ಹೈಕಮಾಂಡ್ ಕೊಡೋದು ಅಂತ ಹೇಳಿ ಮುಂದೆ ನಡೆದಿದ್ದಾರೆ. ಇದೇ ವೇಳೆ ಮಾಜಿ ಸಚಿವರ ಬೆಂಬಲಿಗರು ಬೆಳ್ಳುಬ್ಬಿ ಅವರಿಗೆ ಟಿಕೆಟ್ ಕೊಡುವಂತೆ ಒತ್ತಡ ಹಾಕಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *