ಮದುವೆ ಮಂಟಪಕ್ಕೆ ಕುಡಿದು ಬಂದ ವರನಿಗೆ ವಧು ಹೇಗೆ ಬುದ್ಧಿ ಕಲಿಸಿದಳು ಗೊತ್ತೇ? ಮುಂದೆ ಓದಿ..

ನ್ಯೂಸ್ ಕನ್ನಡ ವರದಿ: ಮದ್ಯಪಾನ ಎಷ್ಟೋ ಜನರ ಮನೆಹಾಳು ಮಾಡಿರುವಂತಹ ವಿಷಯ ನಿಮಗೆಲ್ಲಾ ಗೊತ್ತಿದೆ,  ಇಲ್ಲೊಬ್ಬನ ಕುಡಿತದ ಅಭ್ಯಾಸ ಅವನಿಗೆ ಯಾವ ಪರಿಸ್ಥಿತಿ ತಂದಿದೆ ನೋಡಿ..

ಪತರಾ ಕಾಲಾ ಹಳ್ಳಿಯ ಸುರೇಶ್‌ ಪ್ರಕಾಶ್‌ ಸಿಂಗ್ ತಮ್ಮ ಮಗಳು ಚಾಂದಿನಿಗೆ ಮದುವೆ ಮುಹೂರ್ತ ನಿಶ್ಚಯ ಮಾಡಿದ್ದರು. ಅದರ ಪ್ರಕಾರ ಶನಿವಾರ ಹುಡುಗ-ಹುಡುಗಿಯ ಸಂಬಂಧಿಕರೆಲ್ಲಾ ಆಗಮಿಸಿದ್ದರು. ಆದರೆ ಮದುವೆಗೆ ಮೊದಲು ಹುಡುಗಿಗೆ ಹುಡುಗ ಮದ್ಯ ಕುಡಿದಿದ್ದಾನೆ ಎಂಬ ವಿಷಯ ಗೊತ್ತಾಗಿ ಮದುವೆಯಾಗಲು ನಿರಾಕರಿಸಿ ಬಿಟ್ಟಳು.

ಹುಡುಗಿ ಮನೆಯವರು ಆಕೆಯ ಮನವೊಲಿಸಲು ನೋಡಿದರೂ ಆಕೆ ಒಪ್ಪಲಿಲ್ಲ. ಕೊನೆಗೆ ಹುಡುಗ-ಹುಡುಗಿಯ ಕುಟುಂಬದವರ ಮಧ್ಯೆ ಮಾತಿನ ಚಕಾಮಕಿ ನಡೆದು, ಜೋರು ಜಗಳ ನಡೆಯಲಾರಂಭಿಸಿದಾಗ ಹುಡುಗಿ ಮನೆಯವರು ಪೊಲೀಸರನ್ನು ಕರೆಸಿದರು.

ನೀಡಿದ್ದ ಉಡುಗೊರೆಗಳನ್ನು ಹಿಂದಿರುಗಿಸಲಾಯಿತು. ಮಧುಚಂದ್ರದ ಕನಸಿನೊಂದಿಗೆ ಬಂದವ ಮದ್ಯಪಾನದಿಂದಾಗಿ ಹುಡುಗಿಯಿಲ್ಲದೆ ಹಿಂತಿರುಗಬೇಕಾಯಿತು.

Leave a Reply

Your email address will not be published. Required fields are marked *