ಸಲ್ಮಾನ್ ಖಾನ್ 20 ವರ್ಷಗಳಲ್ಲಿ ಸಾಕಷ್ಟು ನೋವನುಭವಿಸಿದ್ದಾರೆ, ಶಿಕ್ಷೆ ಅನಗತ್ಯವಾಗಿತ್ತು: ಶತ್ರುಘ್ನಾ ಸಿನ್ಹ

ನ್ಯೂಸ್ ಕನ್ನಡ ವರದಿ-(07.04.18) ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ರಿಗೆ ಜೋಧ್ ಪುರ ಸೆಶನ್ಸ್ ನ್ಯಾಯಾಲಯವು 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈಗಾಗಲೇ ಸಲ್ಮಾನ್ ಖಾನ್ ಜೈಲಿನಲ್ಲಿದ್ದು, ಜಾಮೀನು ಅರ್ಜಿಯ ತೀರ್ಪಿಗಾಗಿ ಕಾಯುತ್ತಿದ್ದಾರೆ. ಈ ನಡುವೆ ಈ ಪ್ರಕರಣದ ಕುರಿತಾದಂತೆ ಹಲವರು ಸಂಭ್ರಮಾಚರಣೆ ನಡೆಸಿದ್ದು, ಇನ್ನು ಕೆಲವರು ಸಲ್ಮಾನ್ ಖಾನ್ ಕುರಿತಾದಂತೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಇದೀಗ ಸಲ್ಮಾನ್ ಖಾನ್ ರ ಕುಟುಂಬ ಸ್ನೇಹಿತ ಹಾಗೂ ನಟ ಶತ್ರುಘ್ನಾ ಸಿನ್ಹಾ, ಸಲ್ಮಾನ್ ಖಾನ್ 20 ವರ್ಷಗಳಲ್ಲಿ ಸಾಕಷ್ಟು ನೋವನುಭವಿಸಿದ್ದಾರೆ, ಶಿಕ್ಷೆ ಅನಗತ್ಯವಾಗಿತ್ತು ಎಂದು ಹೇಳಿದ್ದಾರೆ.

ಈ ಪ್ರಕರಣದ ಕುರಿತಾದಂತೆ ಸಲ್ಮಾನ್ ಖಾನ್ ಮಾತ್ರವಲ್ಲದೇ ಸಲ್ಮಾನ್ ರ ಕುಟುಂಬಸ್ಥರು ಕೂಡಾ ದುಃಖಿತರಾಗಿದ್ದಾರೆ. ಸಲ್ಮಾನ್ ಖಾನ್ ಈಗಾಗಲೇ 20 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ಈ ಐದು ವರ್ಷಗಳ ಜೈಲುಶಿಕ್ಷೆಯು ಕಠಿಣವಾದುದಾಗಿದೆ. ಸಲ್ಮಾನ್ ಖಾನ್ ಗೆ ಮಾತ್ರ ಯಾಕೆ ಶಿಕ್ಷೆ ನಿಡಲಾಗಿದೆ. ಉಳಿದ ಆರೋಪಿಗಳಾದ ಸೈಫ್ ಅಲಿ ಖಾನ್, ನೀಲಂ, ಸೋನಾಲಿ ಬೇಂದ್ರೆ, ತಬು ಮಾನವೀಯ ಗುಣಗಳಿರುವವರು ಎಂದು ಖುಲಾಸೆಗೊಳಿಸಲಾಗಿದೆ. ಈ ರೀತಿಯ ತಾರತಮ್ಯ ಏಕೆ ಎಂದು ನನಗೆ ತಿಳಿಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *