ವಿರಾಟ್ ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೋ ರೊನಾಲ್ಡೋ ಇದ್ದಂತೆ ಎಂದ ಚೆನ್ನೈ ತಂಡದ ಸ್ಟಾರ್ ಆಟಗಾರ!
ನ್ಯೂಸ್ ಕನ್ನಡ ವರದಿ-(17.04.18): ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಹವಾ ಪ್ರಾರಂಭವಾಗಿದೆ. ಎಲ್ಲಾ ತಂಡಗಳು ಕೂಡಾ ಉತ್ತಮ ಪ್ರದರ್ಶನವನ್ನೇ ನೀಡುತ್ತಿವೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿದ್ದು, ಅದ್ಭುತ ಪ್ರದರ್ಶನವನ್ನು ತೋರುತ್ತಿದ್ದಾರೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಡ್ವೇನ್ ಬ್ರಾವೋ ವಿರಾಟ್ ಕೊಹ್ಲಿಯನ್ನು ಪೋರ್ಚುಗಲ್ ತಂಡದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋಗೆ ಹೋಲಿಕೆ ಮಾಡಿ ಹಾಡಿ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ಓರ್ವ ಅದ್ಭುತ ಆಟಗಾರ. ಅವರೊಂದಿಗಿನ ನನ್ನ ಸಂಬಂಧ ತುಂಬಾ ಉತ್ತಮವಾಗಿದೆ. ವಿರಾಟ್ ಕೊಹ್ಲಿಯನ್ನು ನೋಡಿದಾಗಲೆಲ್ಲಾ ಕ್ರಿಕೆಟ್ ನ ಕ್ರಿಸ್ಟಿಯಾನೋ ರೊನಾಲ್ಡೋರನ್ನು ನೋಡಿದಂತೆ ಆಗುತ್ತದೆ, ನನ್ನ ಕಿರಿಯ ಸಹೋದರ ಡ್ಯಾರನ್ ಬ್ರಾವೋ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ನಲ್ಲಿ ಕೊಹ್ಲಿ ಜೊತೆಗಿದ್ದ. ನಾನು ಆತನಿಗೆ ವಿರಾಟ್ ಕೊಹ್ಲಿಯನ್ನು ಮಾದರಿಯಾಗಿಟ್ಟುಕೊಳ್ಳುವಂತೆ ಕಿವಿಮಾತು ಹೇಳಿದ್ದೆ ಎಂದು ಡ್ವೇನ್ ಬ್ರಾವೋ ಹೇಳಿದ್ದಾರೆ.