ಕಾರ್ಗಿಲ್ ನಲ್ಲಿ ಪಾಕ್ ಪಡೆಯ ಸಂಚು ವಿಫಲ ಗೊಳಿಸಿದ್ದ ಬಖೇರ್ ವಾಲಗಳು!

ನ್ಯೂಸ್ ಕನ್ನಡ ವರದಿ(17-04-2018): ಜಮ್ಮುವಿನ ಕಥುವಾದಲ್ಲಿ ದುಷ್ಕರ್ಮಿಗಳಿಂದ ಅತ್ಯಾಚಾರವೆಸಗಿ ಕೊಲ್ಲಲ್ಪಟ್ಟ 8ರ ಹರೆಸದ ಆಸಿಫಾಳ ಮುಸ್ಲಿಮ್ ಬಖೇರ್ ವಾಲಗಳು ತಮ್ಮ ದೇಶ ಪ್ರೇಮವನ್ನು ತೋರ್ಪಡಿಸಿದ ಹಲವು ಪ್ರಸಂಗಗಳು ಬೆಳಕಿಗೆ ಬಂದಿದೆ.

1999ರಲ್ಲಿ ಪಾಕ್ ಸೈನಿಕರು ಅಕ್ರಮವಾಗಿ ನುಸುಳಿಕೊಂಡು ಕಾರ್ಗಿಲ್ ಪ್ರದೇಶಕ್ಕೆ ಬಂದ ಸುದ್ಧಿಯನ್ನು ಭಾರತದ ಸೇನೆಗೆ ಮೊಟ್ಟ ಮೊದಲಾಗಿ ತಿಳಿಸಿದವರು ಇದೇ ಬಖೇರ್ ವಾಲಗಳು. ತಾವು ಆಡು,ಕುರಿ ಹಾಗೂ ಕುದುರೆಗಳನ್ನು ಮೇಯಿಸಿಕೊಂಡು ಗಡಿ ಪ್ರದೇಶಕ್ಕೆ ಹೋದಾಗ ಅಕ್ರಮವಾಗಿ ನುಸುಳಿ ಬರುತ್ತಿರುವ ಪಾಕ್ ಸೈನಿಕರನ್ನು ನೋಡಿದ ಬಖೇರ್ ವಾಲಗಳು ಭಾರತೀಯ ಪಡೆಗಳಿಗೆ ಮಾಹಿತಿ ಕೊಟ್ಟಿದ್ದರು.

1965ರ ಭಾರತ-ಪಾಕ್ ಯುದ್ಧದ ವೇಳೆಯಲ್ಲೂ ಬಖೇರ್ ವಾಲ ಸಮುದಾಯದ ಧಾರ್ಮಿಕ ಮೌಲ್ವಿ ಮೌಲಾನ ಗುಲಾದೀನ್ ಅವರು ಬಖೇರ್ ವಾಲಗಳು ಭಾರತದ ಸೇನೆಯೊಂದಿಗೆ ಕೈಜೋಡಿಸಿ ಶತ್ರು ದೇಶದೊಂದಿಗೆ ಹೋರಾಡಬೇಕೆಂದು ಕರೆ ನೀಡಿದ್ದರು. ಅದಕ್ಕಾಗಿ ಭಾರತ ಸರಕಾರವು ಮೌಲಾನ ಗುಲಾದ್ದೀನ್ ಅವರನ್ವು ಗೌರವ ನೀಡಿ ಸನ್ಮಾನಿಸಿತ್ತು.

ಪಾಕ್ ಸೈನಿಕರು ಭಾರತದ ಮೇಲೆ ಪ್ರತೀ ಬಾರಿಯೂ ದಾಳಿ ನಡೆಸಲು ಸಂಚು ಹೂಡಿದಾಗ, ಆ ಮಾಹಿತಿಯನ್ನು ಭಾರತೀಯ ಸೇನಯ ಅಧಿಕಾರಿಗಳನ್ನು ಮುಟ್ಟಿಸಿ ದೇಶಪ್ರೇಮವನ್ನು ಮೆರೆದಿದ್ದಾರೆ ಇದೇ ಬಖೇರ್ ವಾಲಗಳು.

Leave a Reply

Your email address will not be published. Required fields are marked *