ಮಿಥುನ್ ರೈಗೆ ಕೈತಪ್ಪಿದ ಟಿಕೆಟ್: ಸಾಮೂಹಿಕ ರಾಜೀನಾಮೆ ನೀಡಿದ ಯುವ ಕಾಂಗ್ರೆಸ್ ಪದಾಧಿಕಾರಿಗಳು!

ನ್ಯೂಸ್ ಕನ್ನಡ ವರದಿ-(17.04.18): ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕವು ಮೇ12ರಂದು ನಿಗದಿಯಾಗಿದೆ. ಇದೀಗ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಭಿನ್ನಮತ ಪ್ರಾರಂಬವಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರಿಗೆ ಈ ಬಾರಿ ಟಿಕೆಟ್ ನೀಡದ್ದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂದು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಗುಡ್ಡೆಗುತ್ಲು, ಮೂರು ವರ್ಷಗಳ ಹಿಂದೆಯೇ ಮೂಡಬಿದಿರೆ-ಮುಲ್ಕಿ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಗೆ ಟಿಕೆಟ್ ನೀಡುವುದಾಗಿ ನಿರ್ಧಾರ ಮಾಡಲಾಗಿತ್ತು. ಆದರೆ ಇದೀಗ ಮಾತು ತಪ್ಪಿದ್ದು ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದ ಮಿಥುನ್ ರೈಯವರಿಗೆ ಟಿಕೆಟ್ ನೀಡಿಲ್ಲ.

ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನ ಎಂಟು ಕ್ಷೇತ್ರಗಳ ಪಧಾಧಿಕಾರಿಗಳೆಲ್ಲಾ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇವೆ. ಮಿಥುನ್ ರೈಯವರು ತಮ್ಮ ಮುಂದಿನ ನಡೆಯನ್ನು ಸಪಷ್ಟಪಡಿಸುವವರೆಗೆ ನಾವು ತಟಸ್ಥ ತೀರ್ಮಾನದಲ್ಲಿರುತ್ತೇವೆ ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಯುವ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನೇತಾರರಾದ ಸುಹೈಲ್ ಕಂದಕ್, ಯು.ಟಿ ಮುಹಮ್ಮದ್ ತೌಸೀಫ್, ಮೆಲ್ವಿನ್ ರೇಗೋ, ಅಭಿನಂದನ್, ಪ್ರಶಾಂತ್ ಕುಲಾಲ್, ಮೆಲ್ವಿನ್ ರೇಗೋ, ಸಿದ್ದೀಕ್, ಪ್ರಸಾದ್ ಮಲ್ಲಿ, ವರುಣ್ ರಾಜ್, ಗಿರೀಶ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *