ರಾಜಕೀಯಕ್ಕೆ ಎಂಟ್ರಿ ನೀಡಿದ ನಟಿ ಅಮೂಲ್ಯ! ಯಾವ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಗೊತ್ತೇ?
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಮಚಂದ್ರ ಅವರು ತಮ್ಮ ಸೊಸೆ ನಟಿ ಅಮೂಲ್ಯ ಜೊತೆ ಜೆಡಿಎಸ್ ಸೇರ್ಪಡೆಯಾದರು. ಈ ಮೂಲಕ ನಟಿ ಅಮೂಲ್ಯ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ಆಗಮಿಸಿದ ರಾಮಚಂದ್ರ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು. ರಾಮಚಂದ್ರ ಜೊತೆ ಅವರ ಪುತ್ರ ಜಗದೀಶ್ ಹಾಗೂ ಸೊಸೆ ನಟಿ ಅಮೂಲ್ಯ ಕೂಡ ಜೆಡಿಎಸ್ ಸೇರಿದರು.
ರಾಮಚಂದ್ರಗೆ ರಾಜರಾಜೇಶ್ವರಿನಗರ ಕ್ಷೇತ್ರದ ಟಿಕೆಟ್ ನೀಡಲಾಗಿದ್ದು, ಸೊಸೆ ಅಮೂಲ್ಯ ಜೆಡಿಎಸ್ ಸ್ಟಾರ್ ಕ್ಯಾಂಪೇನರ್ ಆಗಲಿದ್ದಾರೆ. ಆ ಮೂಲಕ ಸಕ್ರಿಯ ರಾಜಕಾರಣಕ್ಕೆ ಅಮೂಲ್ಯ ಎಂಟ್ರಿ ಕೊಡಲಿದ್ದಾರೆ. ರಾಮಚಂದ್ರ ಕುಟುಂಬವನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ದೇವೇಗೌಡರು, ಇದು ಅತ್ಯಂತ ಸಂತೋಷದ ದಿನ. ಹಲವು ಪ್ರಭಾವಿಗಳು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದಿನೇ ದಿನೆ ಪಕ್ಷ ಬಲಿಷ್ಠ ಆಗುತ್ತಿದೆ. ಜನರ ಆಶೀರ್ವಾದ ಕುಮಾರಸ್ವಾಮಿಗೆ ಸಿಗುತ್ತಿದೆ. ಯಾವಾಗಲೂ ದೈವದಲ್ಲಿ ನಂಬಿಕೆ ಇಟ್ಟವನು ನಾನು. ಈ ಬರಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.